ದ.ಕ. ಜಿಲ್ಲೆ : ಕೋವಿಡ್‌ಗೆ ಆರು ಮಂದಿ ಬಲಿ ; ಹೊಸದಾಗಿ 194 ಮಂದಿಗೆ ಕೊರೋನ ಸೋಂಕು

Update: 2020-08-08 15:29 GMT

ಮಂಗಳೂರು, ಆ.8: ತಾಲೂಕಿನಲ್ಲಿ ಕೊರೋನ ಸೋಂಕಿಗೆ ಶನಿವಾರ ಮತ್ತೆ ಆರು ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 194 ಮಂದಿಗೆ ಕೊರೋನ ಸೋಂಕು ತಗಲುವ ಜೊತೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,000 ಗಡಿ ದಾಟಿರುವುದು ಸಾರ್ವಜನಿಕ ವಯಲದಲ್ಲಿ ಮತ್ತಷ್ಟು ಭೀತಿ ಹೆಚ್ಚಿದೆ.

ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟವರೆಲ್ಲ ಮಂಗಳೂರು ತಾಲೂಕಿನವರು. ಮೃತರು ವಿವಿಧ ರೋಗಗಳ ಜೊತೆ ಕೊರೋನದಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 214 ಮಂದಿ ಕೊರೋನ ಸೋಂಕಿತರು ಸಾವನ್ನಪ್ಪಿದಂತಾಗಿದೆ.

ಶನಿವಾರ ಪತ್ತೆಯಾದ 194 ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ 98 ಸಾಮಾನ್ಯ ಶೀತ ಜ್ವರ ಪ್ರಕರಣ, ಉಸಿರಾಟ ಸಮಸ್ಯೆಯ 12 ಪ್ರಕರಣ ಮತ್ತು 15 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 69 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
194 ಸೋಂಕಿತರ ಪೈಕಿ 129 ಮಂದಿ ಮಂಗಳೂರಿನವರೇ ಆಗಿದ್ದಾರೆ. ಇನ್ನು ಬೆಳ್ತಂಗಡಿ, ಪುತ್ತೂರು ತಲಾ 16, ಬಂಟ್ವಾಳ-15, ಸುಳ್ಯ-7, ಹೊರಜಿಲ್ಲೆಯ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ದ.ಕ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7,075 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 183 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 3,487ಕ್ಕೆ ಏರಿಕೆಯಾಗಿದೆ. ಸದ್ಯ ವಿವಿಧ ಆಸ್ಪತ್ರೆಯಲ್ಲಿ 3,374 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News