ಎಐಸಿ ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್ ಉದ್ಘಾಟನೆ

Update: 2020-08-08 14:33 GMT

ನಿಟ್ಟೆ, ಆ.8: ಸ್ಟಾರ್ಟ್ ಅಪ್ ಇನ್‌ಕ್ಯುಬೇಟರ್‌ಗಳು ಸ್ಥಳೀಯ ಆಶೋತ್ತರ ಗಳನ್ನು ಪೂರೈಸುವುದರೊಂದಿಗೆ ದೇಶದ ಸಾರ್ವಕಾಲಿಕ ಪ್ರಗತಿಯ ಚುಕ್ಕಾಣಿ ಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಭಾರತ ಸರಕಾರದ ನೀತಿ ಆಯೋಗದ ಅಟಲ್ ಇನೊವೇಷನ್ ಸೆಂಟರ್‌ನ ಮಿಷನ್ ಡೈರೆಕ್ಟರ್ ರಮಣನ್ ರಾಮನಾಥ್ ಅಭಿಪ್ರಾಯಪಟ್ಟಿದ್ದಾರೆ.

ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಎಐಸಿ ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್‌ನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಟಲ್ ಇನ್‌ಕ್ಯುಬೇಶನ್ ಸೆಂಟರ್ ಪ್ರಸ್ತುತ ಆತ್ಮ ನಿರ್ಭರ್ ಭಾರತದ ಪ್ರಧಾನ ಸ್ಥಂಭವಾಗಿದೆ. ನಮ್ಮ ದೇಶದ ಯುವಜನತೆ ಸೃಜನಶೀಲತೆ, ಆವಿಷ್ಕಾರ ಯುತ, ಉತ್ಸಾಹಿ ಮನೋಭಾವದವರಾಗಿದ್ದು, ಅವರು ನಮ್ಮ ದೇಶದ ಆಸ್ತಿ ಯಾಗಿದ್ದಾರೆ. ಅವರನ್ನು ಈ ಕೇಂದ್ರಗಳು ಉದ್ದಿಮೆ ಶಾಹಿಗಳಾಗಿ ಪರಿವರ್ತನೆ ಗೊಳಿಸಿದೇಶದ ಯಶಸ್ವಿ ಉದ್ಯೋಗದಾತರಾಗಿ ಕೆಲಸ ಮಾಡುವಂತೆ ಮಾಡುತ್ತವೆ ಎಂದರು.

ಮುಂದಿನ 5-10 ವರ್ಷಗಳೊಳಗೆ 150 ಮಿಲಿಯಕ್ಕಿಂತಲೂ ಅಧಿಕ ವಿದ್ಯಾವಂತ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಗೆ ಆಗಮಿಸಲಿದ್ದಾರೆ. ಅವರಿಗೆ ಸಮಸ್ಯೆಗಳನ್ನು ಪರಿಹಾರಗೊಳಿಸುವ ಶಕ್ತಿಯನ್ನು ನೀಡಬೇಕಾಗಿದೆ. ಈ ಕೇಂದ್ರ ವಿಶ್ವದರ್ಜೆ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ನಿಟ್ಟೆ ವಿದ್ಯಾಸಂಸ್ಥೆಗಳಲ್ಲಿ ಇದಕ್ಕೆಬೇಕಾದ ಯೋಗ್ಯ ‘ಇಕೋ ಸಿಸ್ಟಮ್’ ಇದೆ. ಕೃಷಿ, ಜೈವಿಕ, ಮೀನುಗಾರಿಕಾ ಕ್ಷೇತ್ರಗಳು ವ್ಯಾಪಕ ಅವಕಾಶಗಳನ್ನು ನೀಡುತ್ತಿದೆ ಎಂದು ರಾಮನಾಥನ್ ನುಡಿದರು.

ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳೂ ಆದ ಎನ್.ವಿನಯ ಹೆಗ್ಡೆ ದೀಪ ಬೆಳಗಿಸುವ ಮೂಲಕ ಕೇಂದ್ರ ವನ್ನು ಉದ್ಘಾಟಿಸಿ ಮಾತನಾಡಿ, ಇದೊಂದು ಚಾರಿತ್ರಿಕ ಘಟನೆಯಾಗಿದ್ದು, ‘ಬ್ಯಾಂಕುಗಳ ತೊಟ್ಟಿಲು’ ಎಂದೇ ಪರಿಗಣಿತವಾದ ಅವಿಭಜಿತ ದಕ.ಕ.ಜಿಲ್ಲೆ ಹಲವು ಬ್ಯಾಂಕುಗಳ, ಉದ್ದಿಮೆಶಾಹಿಗಳ ತವರೂರು. ಈ ಕೇಂದ್ರ ಯುವಜನತೆಯ ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಹೊಸ ಆಯಾಮ ನೀಡಲಿದೆ ಎಂದರು.  ಎಐಸಿ ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್‌ನ ಸಿಇಒ ಡಾ.ಎ.ಪಿ.ಆಚಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ಕೇಂದ್ರದ ಚಟುವಟಿಕೆ ಗಳ ವಿವರ ನೀಡಿದರು.

 ಎಐಸಿ ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್‌ನ ಸಿಇಒ ಡಾ.ಎ.ಪಿ.ಆಚಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ಕೇಂದ್ರದ ಚಟುವಟಿಕೆ ಗಳ ವಿವರ ನೀಡಿದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿವಿಯ ಸಹ ಕುಲಪತಿ ವಿಶಾಲ್ ಹೆಗ್ಡೆ, ಉಪಕುಲಪತಿ ಡಾ.ಸತೀಶ್‌ಕುಮಾರ್ ಭಂಡಾರಿ, ಸಹ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ ಎನ್. ಚಿಪ್ಲೂಣ್‌ಕರ್, ರಿಜಿಸ್ಟ್ರಾರ್ ಪ್ರೊ. ಯೋಗೀಶ್ ಹೆಗ್ಡೆ, ನಿಟ್ಟೆ ವಿವಿ ರಿಜಿಸ್ಟ್ರಾರ್ ಡಾ.ಅಲ್ಕಾ ಕುಲಕರ್ಣಿ, ನಿಟ್ಟೆ ಎಂಬಿಎ ನಿರ್ದೇಶಕ ಡಾ.ಕೆ.ಶಂಕರನ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News