ಅನ್ಯಾಯದ ವಿರುದ್ಧ ಹೋರಾಡಿ,ಹೆದರಬೇಡಿ:ರಾಹುಲ್ ಗಾಂಧಿ

Update: 2020-08-08 18:34 GMT

ಹೊಸದಿಲ್ಲಿ,ಆ.8: ಮಹಾತ್ಮಾ ಗಾಂಧಿಯವರ ‘ಮಾಡು ಇಲ್ಲವೇ ಮಡಿ’ ಘೋಷಣೆಗೆ ಈಗ ‘ಅನ್ಯಾಯದ ವಿರುದ್ಧ ಹೋರಾಡಿ,ಹೆದರಬೇಡಿ’ ಎಂಬ ಅರ್ಥವನ್ನು ನೀಡಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ದಿನವಾದ ಶನಿವಾರ ಟ್ವೀಟಿಸಿದ್ದಾರೆ.

ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ಅಂತ್ಯಗೊಳಿಸುವಂತೆ ಆಗ್ರಹಿಸಲು ಮಹಾತ್ಮಾ ಗಾಂಧಿಯವರು 1942,ಆ.8ರಂದು ಎಐಸಿಸಿಯ ಮುಂಬೈ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸಿದ್ದು,‘ಮಾಡು ಇಲ್ಲವೇ ಮಡಿ’ಎಂಬ ಕರೆಯನ್ನು ಭಾರತೀಯರಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News