ಉಡುಪಿ: ಕಕ್ಕುಂಜೆಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತೀವ್ರ ವಿರೋಧ

Update: 2020-08-09 14:34 GMT

ಉಡುಪಿ, ಆ.9: ಉಡುಪಿ ನಗರಸಭಾ ವ್ಯಾಪ್ತಿಯ ಕಕ್ಕುಂಜೆ ವಾರ್ಡಿನ ಕಕ್ಕುಂಜೆ ಕಟ್ಟೆ ಶ್ರೀಮಹಾದೇವಿ ಅಮ್ಮನ ದೇವಸ್ಥಾನದ ಆವರಣದಲ್ಲಿ ಕೆಯುಐ ಡಿಎ್ಸಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ನೀರಿನ ಟ್ಯಾಂಕಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 ಆ.9ರಂದು ದೇವಸ್ಥಾನದ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ, ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ನಡಾವಳಿ, ಮಹಾಅನ್ನ ಸಂತರ್ಪಣೆ, ಸಾಸ್ಕೃತಿಕ ಕಾರ್ಯಕ್ರಮ ನಡೆಯುವ ರಂಗ ವೇದಿಕೆ ಇದಾಗಿದ್ದು ವಾರ್ಷಿಕ ಜುಮಾದಿ ದೈವದ ಕೋಲಗಳು ನಡೆಯುತ್ತವೆ. ಹೀಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವಂತ ಹುನ್ನಾರು ನಡೆಯುತ್ತಿದೆ. ಇದನ್ನು ಬೇರೆ ಕಡೆಗೆ ಸ್ಥಳಾಂತರಿ ಬೇಕು ಎಂದು ಒತ್ತಾಯಿಸಲಾಯಿತು.

ದೇವಸ್ಥಾನ ಆಡಳಿತ ಮೊಕ್ತೇಸರ ಕಾಂತ್ ಶೆಟ್ಟಿ, ಅಧ್ಯಕ್ಷ ಅಶೋಕ ಪೂಜಾರಿ, ಕಕ್ಕುಂಜೆ ಶ್ರೀಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷ ಪ್ರವೀಣ್ ಪಾಲನ್, ಮಾಜಿ ಅಧ್ಯಕ್ಷ ಉದಯ ಸುವರ್ಣ, ನಗರಸಭಾ ಸದಸ್ಯ ಬಾಲಕೃಷ್ಣ ಡಿ.ಶೆಟ್ಟಿ, ಮಾಜಿ ಸದಸ್ಯೆ ಶೋಭಾ ಸುರೇಶ, ನಿಟ್ಟೂರು ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾ ಧ್ಯಾಯ ಭಾಸ್ಕರ ಸುವರ್ಣ, ಉಡುಪಿ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ರೀಕೇಶ ಪಾಲನ್, ಬೊಬ್ಬರ್ಯ ದೈವಸ್ಥಾನ ಅಧ್ಯಕ್ಷ ಭೂಪಾಲ ಶೆಟ್ಟಿ, ಕಕ್ಕುಂಜೆ ಶ್ರೀಬಬ್ಬು ಸ್ವಾಮಿ ದೈವಸ್ಥಾನ ಅಧ್ಯಕ್ಷ ಸುರೇಶ ಸುವರ್ಣ, ಪ್ರವೀಣ್ ದೇವಾಡಿಗ, ಸುನೀಲ್ ಶೆಟ್ಟಿ, ಜಗದೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಚ್ಚೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News