ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2020-08-09 14:54 GMT

ಕೋಟ, ಆ.9: ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಚಿನ್ನಾ ಭರಣ ಕಳವು ಮಾಡಿರುವ ಘಟನೆ ಜು.30ರಿಂದ ಆ.8ರ ಮಧ್ಯಾವಧಿ ಯಲ್ಲಿ ಬನ್ನಾಡಿ ಎಂಬಲ್ಲಿ ನಡೆದಿದೆ.

ಪ್ರಾಣೇಶ ಎಂಬವರು ವಾಸವಾಗಿರುವ ಬಾಡಿಗೆ ಮನೆಯ ಮೆಲ್ಚಾವಣಿಗೆ ಹಾಕಿದ ಹೆಂಚನ್ನು ತೆಗೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 4 ಜೊತೆ ಕಿವಿಯ ಓಲೆ, 3 ಜೊತೆ ಕಿವಿಯ ಟಿಕ್ಕಿ ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 23,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News