​ಕೊರೋನ: ಒಂದೇ ಮನೆಯ ಐವರಲ್ಲಿ ಪಾಸಿಟಿವ್

Update: 2020-08-09 15:30 GMT

ಉಡುಪಿ, ಆ.9: ಕೋಟ ಹೋಬಳಿಯ ಐರೋಡಿ ಗ್ರಾಮದ ಒಂದು ಕುಟುಂಬದ ಐವರಲ್ಲಿ ಇಂದು ಕೊರೋನ ಪಾಸಿಟಿವ್ ಕಂಡುಬಂದಿದೆ. ಮನೆಯ ಮಹಿಳೆಯಲ್ಲಿ ಕೆಲದಿನಗಳ ಹಿಂದೆ ಕೊರೋನ ಸೋಂಕು ಪತ್ತೆಯಾಗಿದೆ. ಇದೀಗ ಅವರ ಗಂಡ ಹಾಗೂ ಮಕ್ಕಳಲ್ಲೂ ಇಂದು ಪಾಸಿಟಿವ್ ಕಂಡುಬಂದಿದೆ.

ಇದೀಗ ಈ ಮನೆಯನ್ನು ಆಸುಪಾಸಿನ ನಾಲ್ಕು ಮನೆಗಳೊಂದಿಗೆ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಹಿಲಿಯಾಣ ಗ್ರಾಮದ ಒಬ್ಬರಲ್ಲೂ ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಅಕ್ಕಪಕ್ಕದ ಮೂರು ಮನೆಗಳೊಂದಿಗೆ ಸೀಲ್‌ಡೌನ್ ಮಾಡಲಾಗಿದೆ ಎಂದು ಆರ್‌ಐ ರಾಜು ತಿಳಿಸಿದ್ದಾರೆ.

ಬೈಂದೂರು ತಾಲೂಕಿನಲ್ಲಿ ಇಂದು ಬಡಾಕೆರೆಯ ಇಬ್ಬರು ಹಾಗೂ 11ನೇ ಉಳ್ಳೂರು ಗ್ರಾಮದ ಮೂವರು ಸೇರಿ ಒಟ್ಟು ಐವರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.

ಹೊರಟಿದ್ದು ವಿದೇಶಕ್ಕೆ; ತಲುಪಿದ್ದು ಆಸ್ಪತ್ರೆ

ವಿದೇಶಕ್ಕೆ ಹೋಗುವ ಮುನ್ನ ಕಡ್ಡಾಯವಾಗಿರುವ ಕೊರೋನ ಸರ್ಟಿಫಿಕೇಟ್ ಪಡೆಯಲು ಆಸ್ಪತ್ರೆಗೆ ಪರೀಕ್ಷೆಗೆಂದು ತೆರಳಿದ್ದ ಸಾಸ್ತಾನ ಪಾಂಡೇಶ್ವರ ಗ್ರಾಮದ 47 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕೋವಿಡ್-19 ಪರೀಕ್ಷೆ ವೇಳೆ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಇದೀಗ ಕಂದಾಯ ಅಧಿಕಾರಿಗಳು ಅವರ ಮನೆಯನ್ನು ಸೀಲ್‌ಡೌನ್ ಮಾಡಿದ್ದು, ಆಸುಪಾಸಿನ ಎರಡು ಮನೆಗಳು ಕಂಟೈನ್‌ಮೆಂಟ್ ವಲಯದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News