ನ್ಯೂಝಿಲ್ಯಾಂಡ್: ಕೊರೋನ ಸೋಂಕು ರಹಿತ 100 ದಿನ

Update: 2020-08-09 17:32 GMT

ವೆಲ್ಲಿಂಗ್ಟನ್ (ನ್ಯೂಝಿಲ್ಯಾಂಡ್), ಆ. 9: ನ್ಯೂಝಿಲ್ಯಾಂಡ್‌ನಲ್ಲಿ ರವಿವಾರದವರೆಗೆ 100 ದಿನಗಳ ಕಾಲ ಯಾವುದೇ ಹೊಸ ಕೊರೋನ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಆದರೆ, ಇದು ಕೊರೋನ ವೈರಸ್ ಪ್ರಕರಣಗಳಿಲ್ಲ ಎಂದು ಸಂತೃಪ್ತಿಯಿಂದ ಇರುವ ಕಾಲವಲ್ಲ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ನ್ಯೂಝಿಲ್ಯಾಂಡ್‌ನಲ್ಲಿ ಈಗಲೂ 23 ಸಕ್ರಿಯ ಪ್ರಕರಣಗಳಿವೆ. ಆದರೆ, ಅವುಗಳೆಲ್ಲವೂ ವಿದೇಶೀಯರನ್ನೊಳಗೊಂಡ ಪ್ರಕರಣಗಳು. ವಿದೇಶೀಯರು ಗಡಿ ದಾಟುವ ವೇಳೆ ನಡೆಸಿದ ಪರೀಕ್ಷೆಗಳ ವೇಳೆ ಪತ್ತೆಯಾಗಿರುವ ಪ್ರಕರಣಗಳು ಅವು. ಆ ಎಲ್ಲ ಸೋಂಕಿತರನ್ನು ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರಿಸಲಾಗಿದೆ.

‘‘ಸಮುದಾಯದಲ್ಲಿ ಸೋಂಕು ಹರಡುವಿಕೆಯಿಲ್ಲದೆ, 100 ದಿನಗಳನ್ನು ಕಳೆದಿರುವುದು ಮಹತ್ವದ ಮೈಲಿಗಲ್ಲಾಗಿದೆ. ಆದರೆ, ನಮಗೆಲ್ಲ ಗೊತ್ತಿರುವಂತೆ ನಾವು ಇದರಿಂದ ಮೈಮರೆಯುವ ಹಾಗಿಲ್ಲ’’ ಎಂದು ದೇಶದ ಆರೋಗ್ಯ ಇಲಾಖೆಯ ಮಹಾನಿರ್ದೇಶಕಿ ಆಶ್ಲೀ ಬ್ಲೂಮ್‌ಫೀಲ್ಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News