ಜೆಕೆಪಿಎಂ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾ ಫೈಸಲ್

Update: 2020-08-10 12:59 GMT

ಶ್ರೀನಗರ: ಜಮ್ಮು ಆ್ಯಂಡ್ ಕಾಶ್ಮೀರ್ ಪೀಪಲ್ಸ್ ಮೂವ್ ಮೆಂಟ್ ಪಕ್ಷಕ್ಕೆ ಶಾ ಫೈಸಲ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪಕ್ಷವು ಮಾಹಿತಿ ನೀಡಿದೆ.

“ರಾಜಕೀಯ ಚಟುವಟಿಕೆಗಳೊಂದಿಗೆ ಮುಂದುವರಿಯುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಡಾ. ಶಾ ಫೈಸಲ್ ರಾಜ್ಯ ಕಾರ್ಯಕಾರಿ ಸದಸ್ಯರಿಗೆ ತಿಳಿಸಿದ್ದಾರೆ. ಅವರ ಇಚ್ಛೆಯಂತೆ ರಾಜೀನಾಮೆಯನ್ನು ಸ್ವೀಕರಿಸಲಾಗಿದೆ” ಎಂದು ಪಕ್ಷದ ಪ್ರಕಟನೆ ತಿಳಿಸಿದೆ.

ಶಾ ಫೈಸಲ್ ಅವರ ಮುಂದಿನ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಲಭಿಸದಿದ್ದರೂ ಅವರು ಮತ್ತೆ ಆಡಳಿತ ಸೇವೆಗೆ ಹಿಂದಿರುಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

2010ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಶಾ ಫೈಸಲ್ 2019ರ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಾಶ್ಮೀರಿಗಳ ಹತ್ಯೆ ಮತ್ತು ಭಾರತೀಯ ಮುಸ್ಲಿಮರ ಕಡೆಗಣನೆಯ ವಿರುದ್ಧ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದರು.

“ಅವರೇನು ಮಾಡುತ್ತಾರೆ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಶಿಕ್ಷಣಕ್ಕಾಗಿ ಅವರು ಅಮೆರಿಕಕ್ಕೆ ಹೋಗುತ್ತಾರೆ ಎನ್ನಲಾಗುತ್ತಿದೆ. ಅವರು ಮತ್ತೆ ಆಡಳಿತದಲ್ಲಿ ಸೇವೆ ಸಲ್ಲಿಸಲ ಹಿಂದಿರುಗುತ್ತಾರೆ ಎನ್ನುವ ಮಾತುಗಳೂ ಇವೆ” ಎಂದು ಜೆಕೆಪಿಎಂ ಹಿರಿಯ ನಾಯಕ ಫಿರೋಝ್ ಪೀರ್ಝಾದಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News