ಎಸೆಸೆಲ್ಸಿ ಫಲಿತಾಂಶ : ದ.ಕ. ಜಿಲ್ಲೆಗೆ 'ಬಿ' ಶ್ರೇಣಿ

Update: 2020-08-10 14:33 GMT

ಮಂಗಳೂರು, ಆ.10: ಇಂದು ಪ್ರಕಟಗೊಂಡ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ದ.ಕ. ಜಿಲ್ಲೆ  'ಬಿ' ಶ್ರೇಣಿಗೆ ತೃಪ್ತಿಪಟ್ಟುಕೊಂಡಿದೆ. ಕಳೆದ ವರ್ಷ 7ನೆ ಸ್ಥಾನ ಪಡೆದಿದ್ದ ದ.ಕ. ಜಿಲ್ಲೆ ಈ ಬಾರಿ ಪಟ್ಟಿಯಲ್ಲಿ 12ನೆ ಸ್ಥಾನಕ್ಕೆ ಕುಸಿದಿದೆ.

ಕಳೆದ ಬಾರಿ ದ.ಕ. ಜಿಲ್ಲೆ ಶೇ. 86.85 ಫಲಿತಾಂಶದೊಂದಿಗೆ 7ನೆ ಸ್ಥಾನ ಪಡೆದಿತ್ತು. 2018ರಲ್ಲಿ 4ನೆ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆಗಳಿಗೆ ಫಲಿತಾಂಶ ಶೇಕಡಾವಾರು ಬದಲು ಗ್ರೇಡ್ ನೀಡಿರುವುದರಿಂದ ದ.ಕ. ಜಿಲ್ಲೆ ‘ಬಿ’ ಗ್ರೇಡ್‌ಗೆ ತೃಪ್ತಿ ಪಟ್ಟುಕೊಂಡಿದೆ.

ಕೊರೋನ ಭೀತಿ ನಡುವೆ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳು

ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಅತ್ಯಂತ ವಿಶೇಷ ಹಾಗೂ ಆತಂಕಕಾರಿಯಾಗಿತ್ತು. ಮಾರ್ಚ್ 29ರಿಂದ ನಡೆಯಬೇಕಾಗಿದ್ದೆ ಎಸೆಸೆಲ್ಸಿ ಪರೀಕ್ಷೆ ಕೊರೋನ ಹಾವಳಿಯಿಂದ ಸುಮಾರು ಎರಡು ತಿಂಗಳ ಕಾಲ ಮುಂದೂಡಲ್ಪಟ್ಟಿತ್ತು. ಪರೀಕ್ಷೆ ನಡೆಯುವುದೋ ಇಲ್ಲವೋ ಎಂಬ ಗೊಂದಲದ ನಡುವೆಯೇ ಮಕ್ಕಳ ಜತೆ ಪೋಷಕರು, ಶಿಕ್ಷಕರು ಕೂಡಾ ದಿನ ಕಳೆದಿದ್ದರು. ಕೊನೆಗೆ ಜೂ. 25ರಿಂದ ಜು. 4ರವರೆಗೆ ಪರೀಕ್ಷೆ ದಿನಾಂಕ ನಿಗದಿಯಾಗಿ, ಮಕ್ಕಳು ಒತ್ತಡ, ಆತಂಕದೊಂದಿಗೆ ಪರೀಕ್ಷೆ ಎದುರಿಸಿದ್ದರು.

ಪರೀಕ್ಷಾ ಕೇಂದ್ರಗಳಲ್ಲಿ ಕನಿಷ್ಠ ವಿದ್ಯಾರ್ಥಿಗಳಿಗೆ ಅವಕಾಶ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧಾರಣೆಯೊಂದಿಗೆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಎದುರಿಸಿದ್ದರು. ಪರೀಕ್ಷೆಗಾಗಿ ಮಕ್ಕಳಿಗೆ ಸಾಕಷ್ಟು ಸಮಯಾವಕಾಶ ದೊರಕಿದ್ದರೂ, ಆತಂಕ ಹಾಗೂ ಒತ್ತಡದಿಂದಾಗಿ ಪರೀಕ್ಷೆಯ ಫಲಿತಾಂಶದ ಬಗ್ಗೆಯೂ ಮಕ್ಕಳು, ಪೋಷಕರು ಹಾಗೂ ಶಿಕ್ಷಕರಲ್ಲಿ ತೀವ್ರ ಕುತೂಹಲಕ್ಕೂ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News