×
Ad

ಎಸೆಸೆಲ್ಸಿ ಫಲಿತಾಂಶ : ವೈದ್ಯೆಯಾಗುವ ಕನಸಿನ ಸುರಭಿ ಎಸ್.ಶೆಟ್ಟಿ

Update: 2020-08-10 20:16 IST

ಕುಂದಾಪುರ/ಉಡುಪಿ, ಆ.10: ಗರಿಷ್ಠ 625 ಅಂಕಗಳಲ್ಲಿ 624 ಅಂಕ ಗಳಿಸಿರುವ ಕಿರಿಮಂಜೇಶ್ವರ ಸಾಂದೀಪನಾ ಆಂಗ್ಲ ಮಾಧ್ಯಮ ಶಾಲೆಯ ಸುರಭಿ ಎಸ್.ಶೆಟ್ಟಿ ಅವರು ಮುಂದೆ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಕನಸನ್ನು ಹೊಂದಿ ದ್ದಾರೆ.

ಪ್ರಥಮ ಭಾಷೆ ಕನ್ನಡದಲ್ಲಿ 125, ಇಂಗ್ಲೀಷ್‌ನಲ್ಲಿ 100, ಮೂರನೇ ಭಾಷೆ ಹಿಂದಿಯಲ್ಲಿ 100, ಗಣಿತ 100 ಹಾಗೂ ವಿಜ್ಞಾನದಲ್ಲಿ 100 ಅಂಕ ಗಳನ್ನು ಗಳಿಸಿರುವ ಸುರಭಿ ಸಮಾಜ ಅಧ್ಯಯನದಲ್ಲಿ ಮಾತ್ರ ಒಂದು ಅಂಕ ಕಳೆದುಕೊಂಡು 99 ಅಂಕ ಸಂಪಾದಿಸಿದ್ದಾರೆ. ಇದರಲ್ಲೂ 100 ಅಂಕ ನಿರೀಕ್ಷೆಸಿದ್ದೆ. ಆದರೆ ಒಂದು ಅಂಕ ಕಡಿಮೆ ಬಂದಿರುವುದಕ್ಕೆ ಬೇಸರವಿಲ್ಲ ಎಂದರು.

ಉಪ್ಪುಂದದಲ್ಲಿ ಫರ್ನಿಚರ್ ಶೋರೂಮನ್ನು ಹೊಂದಿರುವ ಸುರೇಶ್ ಶೆಟ್ಟಿ ಹಾಗೂ ಸೀಮಾ ಸುರೇಶ್ ದಂಪತಿಗಳ ಪುತ್ರಿಯಾಗಿರುವ ಸುರಭಿ ಅವರ ತಂಗಿ ಈ ಬಾರಿ ಎಸೆಸೆಲ್ಸಿ ಓದುತಿದ್ದಾರೆ. ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹ ತಮ್ಮ ಈ ಸಾಧನೆಗೆ ಪ್ರಮುಖ ಕಾರಣ ಎಂದವರು ಹೇಳಿದರು.

ಸುರಭಿ ಕಠಿಣ ಪರಿಶ್ರಮದ ಪ್ರಾಮಾಣಿಕ ವಿದ್ಯಾರ್ಥಿ. ಶಾಲೆಯಲ್ಲಿ ಸದಾ ಟಾಪರ್ ಆಗಿದ್ದ ಆಕೆಯಿಂದ ಉತ್ತಮ ಸಾಧನೆಯನ್ನು ನಿರೀಕ್ಷಿಸಿದ್ದೆ. ನಿರೀಕ್ಷೆಗೆ ತಕ್ಕಂತೆ ಆಕೆ ಅಂಕ ಪಡೆದಿದ್ದಾರೆ. ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ಅವರು ಭಾಗವಹಿಸುತಿದ್ದರು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News