ಉಡುಪಿ: 90 ಮಂದಿಗೆ ಕೊರೋನ ಪಾಸಿಟಿವ್; 6 ಮಂದಿ ಮೃತ್ಯು

Update: 2020-08-10 16:26 GMT

ಉಡುಪಿ, ಆ.10: ನೋವೆಲ್ ಕೊರೋನ ವೈರಸ್ ಸೋಂಕು ಸೋಮವಾರ 90 ಮಂದಿಯಲ್ಲಿ ಪತ್ತೆಯಾಗಿದೆ. ಇದರಿಂದ ಈವರೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಕಂಡುಬಂದವರ ಸಂಖ್ಯೆ 6,291ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

117 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 117 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 68 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 49 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 3561ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2762 ಮಂದಿ ಚಿಕಿತ್ಸೆಯಲ್ಲಿದ್ದಾರೆ ಎಂದು ಡಿಎಚ್‌ಓ ಹೇಳಿದರು.

ಕೋವಿಡ್‌ಗೆ 6 ಮಂದಿ ಬಲಿ

ಉಡುಪಿ ಜಿಲ್ಲೆಯಲ್ಲಿ ಇಂದು ಕೋವಿಡ್‌ನಿಂದ ಮೃತರಾದವರ ಸಂಖ್ಯೆ ಆರಕ್ಕೇರಿದೆ. ಇವರಲ್ಲಿ ಮೂವರು ಮಣಿಪಾಲದ ಕೆಎಂಸಿಯಲ್ಲಿ ಮೃತಪಟ್ಟಿ ದ್ದಾರೆ. ತ್ರಾಸಿಯ 72ರ ಹರೆಯದ ಮಹಿಳೆ, ಕುಂದಾಪುರದ 79ರ ಹರೆಯದ ಪುರುಷ, ಕಟಪಾಡಿಯ 81 ವರ್ಷ ಪ್ರಾಯದ ಹಿರಿಯ ನಾಗರಿಕರು ಅನ್ಯ ಕಾಯಿಲೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಉಳಿದಂತೆ 46 ವರ್ಷ ಪ್ರಾಯದ ಮಹಿಳೆ, 65 ವರ್ಷ ಪ್ರಾಯದ ಪುರುಷ ಹಾಗೂ 89 ವರ್ಷ ಪ್ರಾಯದ ಮಹಿಳೆ ಮೃತರಲ್ಲಿ ಸೇರಿದ್ದಾರೆ. ಇಂದು ಹೆಜಮಾಡಿಯ ಮಹಿಳೆಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News