​ಕೋಳಿ ಅಂಕಕ್ಕೆ ದಾಳಿ: ಮೂವರ ಬಂಧನ

Update: 2020-08-10 16:40 GMT

ಕುಂದಾಪುರ, ಆ.10: ಬಸ್ರೂರು ಹಟ್ಟಿಕುದ್ರು ಹೊಸಮನೆ ಎಂಬಲ್ಲಿ ಆ.9 ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಕೋಣಿಯ ಶ್ರೀಕಾಂತ್, ಬಸ್ರೂರಿನ ನಾಗೇಶ್(34), ತಲ್ಲೂರಿನ ಉದಯ (24) ಬಂಧಿತ ಆರೋಪಿಗಳು. ಇವರಿಂದ 3 ಕೋಳಿ ಹುಂಜ, ಎರಡು ಕೋಳಿ ಬಾಳು, ನಗದು ಹಣ ಮತ್ತು ನಾಲ್ಕು ಬೈಕುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News