5000 ಹುದ್ದೆಗಳಿಗೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದೆಯೇ ?: ಇಲ್ಲಿದೆ ವಾಸ್ತವ

Update: 2020-08-10 16:48 GMT

ಹೊಸದಿಲ್ಲಿ, ಆ.10: ಭಾರತೀಯ ರೈಲ್ವೇಯಲ್ಲಿ 5,000ಕ್ಕೂ ಹೆಚ್ಚು ಉದ್ಯೋಗಾವಕಾಶವಿದೆ ಎಂಬ ಜಾಹೀರಾತು ನಕಲಿ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ. ಉದ್ಯೋಗಾವಕಾಶವಿದೆ ಎಂಬ ಅಧಿಸೂಚನೆ ನಿಜವಲ್ಲ. ಈ ಬಗ್ಗೆ ತನಿಖೆ ನಡೆಸಿ, ಸುಳ್ಳು ಸುದ್ಧಿ ಪ್ರಸಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ರೈಲ್ವೇ ನೇಮಕಾತಿ ಮಂಡಳಿ ನಡೆಸುವ ಆರ್‌ಆರ್‌ಬಿ ಎನ್‌ಟಿಪಿಸಿ ಮತ್ತು ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷೆಗಳ ದಿನಾಂಕವನ್ನು ಕಾಯುತ್ತಿರುವವರಿಗೆ, ಆನ್‌ಲೈನ್‌ನಲ್ಲಿ ಪ್ರಸಾರವಾದ ಸುದ್ದಿಯೊಂದರಿಂದ ಖುಷಿಯಾಗಿತ್ತು. ರೈಲ್ವೇ ಇಲಾಖೆಯ ಹುದ್ದೆಗಳಿಗೆ ಪರೀಕ್ಷೆ ನಡೆಸಲು ತನ್ನನ್ನು ನೇಮಿಸಲಾಗಿದೆ ಎಂದು ಹೇಳಿಕೊಂಡಿದ್ದ ಅವೆಸ್ಟ್ರನ್ ಇನ್‌ಫೋಟೆಕ್ ಎಂಬ ಸಂಸ್ಥೆ, ರೈಲ್ವೇಯಲ್ಲಿ 5000ಕ್ಕೂ ಹೆಚ್ಚಿನ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸುವುದಾಗಿ ಹೇಳಿಕೊಂಡಿತ್ತು.

ಆದರೆ ತಾನು ನೇಮಕಾತಿ ಪರೀಕ್ಷೆ ನಡೆಸಲು ಯಾವುದೇ ಖಾಸಗಿ ಸಂಸ್ಥೆಯನ್ನು ನೇಮಿಸಿಲ್ಲ ಎಂದು ರೈಲ್ವೇ ಮಂಡಳಿ ತಿಳಿಸಿದೆ. ರೈಲ್ವೇಯ ಹುದ್ದೆಗಳಿಗೆ ನೇಮಕ ಮಾಡಲು 21 ರೈಲ್ವೇ ನೇಮಕಾತಿ ಮಂಡಳಿ ಹಾಗೂ 16 ರೈಲ್ವೇ ನೇಮಕಾತಿ ಸಮಿತಿಗೆ ಮಾತ್ರ ಅನುಮತಿ ನೀಡಲಾಗಿದೆ. ಈ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನೀಡುವಾಗ ಕೇಂದ್ರೀಯ ಉದ್ಯೋಗ ಅಧಿಸೂಚನೆಯ ಮೂಲಕ ಪ್ರಕಟಿಸಲಾಗುವುದು ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News