ಎಸೆಸೆಲ್ಸಿ: ಮೂಳೂರು ಅಲ್-ಇಹ್ಸಾನ್ ಶೇ.90.3 ಫಲಿತಾಂಶ

Update: 2020-08-10 16:58 GMT

ಕಾಪು, ಆ.10: 2019-20ನೆ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನದ ಮೂಳೂರು ಅಲ್-ಇಹ್ಸಾನ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯು ಶೇ.90.3 ಫಲಿ ತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ ಎಲ್ಲಾ 104 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 14 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್, 63 ಪ್ರಥಮ ಶ್ರೇಣಿ, 15 ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯೊಂದಿಗೆ ತೇರ್ಗಡೆಗೊಂಡಿದ್ದಾರೆ. 586 ಅಂಕದೊಂದಿಗೆ ಅನೀಸ್ ಹಸ್ಸನ್ ಹಾಗೂ ಸಕೀನಾ ಕುರ್ರತ್ ಶಾಲೆಗೆ ಪ್ರಥಮ ಸ್ಥಾನಿಗಳಾಗಿದ್ದಾರೆ.

ಸಂಸ್ಥೆಯ ಉಳಿದ ವಿಭಾಗಗಳಾದ ರೆಸಿಡೆನ್ಸಿಯಲ್ ಸ್ಕೂಲ್, ಹಿಪ್ಲ್ ಲುಲ್ ಖುರ್‌ಆನ್, ದಾರುಲ್ ಮಸಾಕೀನ್ ಆಂಗ್ಲ ಮಾಧ್ಯಮದಲಿ ಶೇ.100 ಹಾಗೂ ಕನ್ನಡ ಮಾಧ್ಯಮದಲಿಯೂ ಉತ್ತಮ ಫಲಿತಾಂಶ ಪಡೆದಿದೆ.

ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಸಂಸ್ಥೆಯ ಸಂಚಾಲಕರು, ಮ್ಯಾನೇಜರ್, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಅಧ್ಯಾಪಕರು, ವಸತಿ ವಿಭಾಗದ ಸಿಬ್ಬಂದಿಗಳನ್ನು ಸಂಸ್ಥೆಯ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್.ಆಟ ಕ್ಕೋಯ ತಂಙಳ್ ಕುಂಬೋಲ್ ಹಾಗೂ ಡಿಕೆಎಸ್‌ಸಿ ಕೇಂದ್ರ ಸಮಿತಿಯ ಪದಾಧಿಕಾರಿಗಳು ಮತ್ತು ಮರ್ಕಝ್ ಆಡಳಿತ ಸಮಿತಿಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News