ಎಸೆಸೆಲ್ಸಿ : ಗಂಗೊಳ್ಳಿ ತೌಹೀದ್ ಶಾಲೆಗೆ ಶೇ.95.23 ಫಲಿತಾಂಶ

Update: 2020-08-10 17:02 GMT

ಕುಂದಾಪುರ, ಆ.10: ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.95.23 ಫಲಿತಾಂಶ ಪಡೆದಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 42 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ 11 ಡಿಸ್ಟಿಂಕ್ಷನ್, 26 ಪ್ರಥಮ ದರ್ಜೆ, 2 ದ್ವಿತೀಯ ಹಾಗೂ ಒಬ್ಬರು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಶಾಬನಾ ಪಿರ್ದೌಸ್ ಅವರ ಮಗ ಮುಹಮ್ಮದ್ ಶುರಾಯ್ ಶೇಖ್ 590(ಶೇ.94.40) ಅಂಕದೊಂದಿಗೆ ಶಾಲೆಗೆ ಟಾಪರ್ ಆಗಿ ಮೂಡಿಬಂದಿದ್ದಾರೆ.

ಶಿರೂರು ತೌಹೀದ್ ಸ್ಕೂಲ್ ಶೇ.93.75 ಫಲಿತಾಂಶ

ಶಿರೂರು ತೌಹೀದ್ ಪಬ್ಲಿಕ್ ಸ್ಕೂಲ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.93.75 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ 5 ಡಿಸ್ಟಿಂಕ್ಷನ್, 16 ಪ್ರಥಮ ದರ್ಜೆ, 9 ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಅಮೀರ್ ಜಾನಿ ಅವರ ಪುತ್ರಿ ಅದಿಯಾ 579(ಶೇ.92.6) ಅಂಕ ದೊಂದಿಗೆ ಶಾಲೆಗೆ ಟಾಪರ್ ಆಗಿ ಮೂಡಿ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News