ಪ್ರಗತಿ ವಿರೋಧಿ ತಿದ್ದುಪಡಿಗನ್ನು ಹಿಂಪಡೆಯಿರಿ: ಬಾಲಕೃಷ್ಣ ಶೆಟ್ಟಿ

Update: 2020-08-10 17:07 GMT

ಉಡುಪಿ, ಆ.10: ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿರೋಧ ಪ್ರತಿ ಭಟನೆೆಯ ಕರೆಯಂತೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಇಂದು ಧರಣಿ ನಡೆಸಲಾಯಿತು.

ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಾರ್ಮಿಕ ಕಾಯಿದೆಗಳಿಗೆ ತರಲಾಗಿರುವ ಪ್ರಗತಿ ವಿರೋಧಿ ತಿದ್ದುಪಡಿಗಳು ಹಾಗೂ ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡುವಿಕೆಯ ಆದೇಶಗಳನ್ನು ಕೂಡಲೇ ಹಿಂಪಡೆಯ ಬೇಕು. ಭೂಸಂಬಂಧಿ ಕಾನೂನುಗಳು, ಎಪಿಎಂಸಿ ಕಾಯಿದೆ ಮತ್ತು ಅಗತ್ಯ ಸಾಮಾಗ್ರಿ ಕಾಯಿದೆಗಳಿಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರಿವಾಜ್ಞೆ ಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಅಂಚೆ ಅಧೀಕ್ಷಕರ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಶಶಿಧರ್ ಗೋಲ್ಲ, ಉಮೇಶ್ ಕುಂದರ್, ಭಾರತಿ, ಕಮಲ, ಶೇಖರ್ ಬಂಗೇರ, ದಯಾನಂದ, ಗಣೇಶ ನಾಯಕ್, ನಳಿನಿ, ಸುಭಾಷ್ ನಾಯಕ, ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಎಸ್., ಮುಖಂಡರಾದ ಮೋಹನ್, ವಿದ್ಯಾರಾಜ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಶಶಿಕಲಾ, ಸುಚಿತ್ರ, ಜಾನ್ ಡಿಸೋಜ ಉಪಸ್ಥಿತರಿದ್ದರು.

ಬೈಂದೂರಿನಲ್ಲಿ ಧರಣಿ: ಪ್ರತಿರೋಧ ಪ್ರತಿಭಟನೆಯ ಕರೆಯ ಮೇರೆಗೆ ಬೈಂದೂರು ಅಂಚೆ ಕಚೇರಿ ಎದುರು ರೈತ, ಕೃಷಿಕೂಲಿ, ಕಾಮಿಕರ್ರ ಪ್ರತಿಭಟನೆ ಇಂದು ಜರುಗಿತು.

ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ಮುಖಂಡರಾದ ರಾಜೀವ್ ಪಡುಕೋಣೆ, ವೆಂಕಟೇಶ್ ಕೋಣಿ, ಗಣೇಶ ದೇವಾಡಿಗ ತೊಂಡೆಮಕ್ಕಿ, ಉದಯ ಗಾಣಿಗ ಮೊಗೇರಿ ಮಾತನಾಡಿದರು. ಕಾರ್ಮಿಕ ಮುಖಂಡರಾದ ಮಾಧವ ದೇವಾಡಿಗ ಉಪ್ಪುಂದ, ಶ್ರೀಧರ್ ಉಪ್ಪುಂದ, ವಿಜಯ ಕೊಯಾನಗರ, ನಾಗರತ್ನ ನಾಡ, ಜನವಾದಿ ಮಹಿಳಾ ಸಂಘದ ಶೀಲಾವತಿ ಉಪಸ್ಥಿತರಿದ್ದರು. ರೋನಾಲ್ಡ್ ರಾಜೇಶ್ ಕ್ವಾಡ್ರ ಮನವಿ ಓದಿದರು.

ಕುಂದಾಪುರದಲ್ಲಿ ಪ್ರತಿಭಟನೆ: ಕುಂದಾಪುರದ ಪ್ರಧಾನ ಅಂಚೆ ಕಛೇರಿಯಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿದರು.ಸಿಐಟಿಯು ಸಂಚಾಲಕ ಎಚ್.ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಈ ವೇಳೆಯಲ್ಲಿ ಸಿಐಟಿಯು ಮುಖಂಡ ರಾದ ಮಹಾಬಲ ವಡೇರಹೋಬಳಿ, ಬಲ್ಕೀಸ್, ಮಹಿಳ ಸಂಘಟನೆಯ ಆರತಿ, ಚಿಕ್ಕ ಮೊಗವೀರ, ಅರುಣ್ ಕುಮಾರ್, ಶ್ರೀನಿವಾಸ ಪೂಜಾರಿ, ಪ್ರಶಾಂತ್ ಸಳ್ವಾಡಿ, ಸಂತೋಷ್ ಹೆಮ್ಮಾಡಿ ಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News