ಜ್ಯೋತಿಷಿಗಳಿಗೆ ಅವಮಾನ ಆರೋಪ : ಯುಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲು

Update: 2020-08-10 17:40 GMT

ಮಂಗಳೂರು, ಆ.10: ಪುರೋಹಿತರು-ಜ್ಯೋತಿಷಿಗಳ ಬಗ್ಗೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಯೂಟ್ಯೂಬ್ ಚಾನೆಲ್ ಹಾಗೂ ಕಲಾವಿದರೊಬ್ಬರ ವಿರುದ್ಧ ಕಾವೂರು ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.

‘ದೈಜಿವರ್ಲ್ಡ್’ ಯೂಟ್ಯೂಬ್ ಚಾನೆಲ್‌ನ ನಿರೂಪಕ ವಾಲ್ಟರ್ ನಂದಳಿಕ ಮತ್ತು ಕಲಾವಿದ ಅರವಿಂದ ಬೋಳಾರ್ ಅವರು ಚಾನೆಲ್‌ನ ಕಾರ್ಯ ಕ್ರಮವೊಂದರಲ್ಲಿ ಪುರೋಹಿತರು-ಜ್ಯೋತಿಷಿಗಳ ಬಗ್ಗೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕುಂಜತ್‌ಬೈಲ್ ನಿವಾಸಿ ಶಿವರಾಜ್ ಪ್ರಕರಣ ದಾಖಲಿಸಿದ್ದಾರೆ.

ಆ.9ರಂದು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ‘ನಂದಳಿಕೆ ವರ್ಸಸ್ ಬೋಳಾರ’ ಅವರ ಸಂಭಾಷಣೆಯ ‘ಬರೆದೀಪಿ ಜ್ಯೋತಿಷಿ’ ಎನ್ನುವ ಕಾರ್ಯಕ್ರಮದಲ್ಲಿ ವಾಲ್ಟರ್ ನಂದಳಿಕೆ ಮತ್ತು ಅರವಿಂದ ಬೋಳಾರ ಅವರು ಪುರೋಹಿತರಿಗೆ ಅವಹೇಳನ ಮಾಡಿದ್ದಾರೆ. ಇದರಿಂದ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News