ಗಾಂಜಾ ಸಾಗಾಟ: ಆರೋಪಿ ಸೆರೆ

Update: 2020-08-10 18:12 GMT

ಮಂಗಳೂರು, ಆ.10: ನಗರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಕೇರಳದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೆಜಿ 100ಗ್ರಾಂ ಗಾಂಜಾ ಸಹಿತ ಆರೋಪಿಯನ್ನು ಬಂದರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಾಸರಗೋಡು ಕುಂಜತ್ತೂರ ನಿವಾಸಿ ಅಹ್ಮದ್ ಶಬೀರ್ (45) ಬಂಧಿತ ಆರೋಪಿ.

ಆರೋಪಿ ನಗರದ ಫಳ್ನೀರ್‌ನ ಬೇಕರಿಯೊಂದರ ಹತ್ತಿರ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೇರಳದ ಕುಂಜತ್ತೂರಿನಿಂದ ಗಾಂಜಾವನ್ನು ತಂದು ನಗರದಲ್ಲಿ ಮಾರಾಟಕ್ಕೆ ಯೋಜನೆ ರೂಪಿಸಿರು ವುದಾಗಿ ಹೇಳಿದ್ದಾನೆ. ಈತನಿಂದ 1.20ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ವಿನಯ್ ಗಾಂವ್ಕರ್ ಹಾಗೂ ಕೇಂದ್ರ ಉಪವಿಭಾಗ ಎಸಿಪಿ ಜಗದೀಶ್ ಮಾರ್ಗದರ್ಶನದಲ್ಲಿ ಬಂದರು ಇನ್‌ಸ್ಪೆಕ್ಟರ್ ಗೋವಿಂದರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಎಸ್‌ಐ ನಾಗರಾಜ್ ಮತ್ತು ಸಿಬ್ಬಂದಿ ಸುಜನ್ ಶೆಟ್ಟಿ, ಮಹೇಶ್, ರೌಡಿ ನಿಗ್ರಹದಳದ ಸಿಬ್ಬಂದಿ ಗಂಗಾಧರ್, ವೆಲೆಸ್ಟಿನ್ ಡಿಸೋಜ, ಸಂತೋಷ್ ಎಚ್., ಕಿಶೋರ್ ಎಚ್., ನಾಗರಾಜ್, ಆಂಜನಪ್ಪ, ಭೀಮಪ್ಪ, ರಮೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News