ಎಸೆಸೆಲ್ಸಿ : ಮಂಜನಾಡಿ ಅಲ್ ಮದೀನ ಸಂಸ್ಥೆಗೆ ಉತ್ತಮ ಫಲಿತಾಂಶ

Update: 2020-08-11 19:30 GMT

ನರಿಂಗಾನ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಅಧೀನದ ಅಲ್ ಮದೀನ ಹೈಸ್ಕೂಲ್ ನರಿಂಗಾನ , ಮಂಜನಾಡಿ ಶಾಲೆಗೆ  ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 90 ಫಲಿತಾಂಶ ದಾಖಲಾಗಿದ್ದು ಒಟ್ಟು 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ, 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ಉತ್ತೀರ್ಣರಾಗಿದ್ದಾರೆ.

ಅಲ್ ಮದೀನ ಕನ್ನಡ ಮಾಧ್ಯಮದಲ್ಲಿ ಒಂದು ವಿದ್ಯಾರ್ಥಿ ವಿಷಿಷ್ಟ ಶ್ರೇಣಿಯಲ್ಲೂ 21 ವಿದ್ಯ್ರಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ತೇರ್ಗಡೆ ಹೊಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೂ ಪರಿಶ್ರಮಿಸಿದ ಶಿಕ್ಷಕರಿಗೂ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಭಿನಂದನೆ ಸಲ್ಲಿಸಿದ್ದಾರೆ. 

ವಿಶಿಷ್ಟ ಶ್ರೇಣಿ ಗಳಿಸಿದವರು: ಹಾಮಿದ್ ಅನ್ವರ್ (574, 92%),ಶಮೀಮ ತಶ್ವಾ (572, 91.5%), ಬಿ.ಎಸ್. ಸಲ್ಮಾನ್ ನಜಾಹ್ (571, 91.36%), ಇಬ್ರಾಹೀಂ ಸ್ವಬೀಹ್ (569,  91.04%), ಆಯಿಶತ್ ಅಫ್ಲಾ (569,  91.04%), ಆಯಿಶತುಲ್ ಐಫ (557, 89.12%), ಆಯಿಶಾ ಅಹ್ಸಾನಾ ( 548, 87.68%), ಖದೀಜತುಲ್ ಕಾಶಿಪಾ (532, 85.1%), ಆಯಿಶತುಲ್ ಫಾಹಿಝ (530, 84.80%), 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News