ಹಾಕಿ ಆಟಗಾರ ಮನ್‌ದೀಪ್ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತ: ಆಸ್ಪತ್ರೆಗೆ ದಾಖಲು

Update: 2020-08-11 08:06 GMT

  ಬೆಂಗಳೂರು, ಆ,11: ಕೊರೋನ ಸೋಂಕಿತ ಹಾಕಿ ಆಟಗಾರ ಮನ್‌ದೀಪ್ ಸಿಂಗ್ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕುಸಿತವಾಗಿದ್ದು,ಅವರನ್ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಮಂಗಳವಾರ ತಿಳಿಸಿದೆ.

ಮನ್‌ದೀಪ್‌ಗೆ ಕೊರೋನ ವೈರಸ್ ತಗಲಿರುವುದು ಸೋಮವಾರ ದೃಢಪಟ್ಟಿತ್ತು. ಭಾರತೀಯ ಹಾಕಿ ತಂಡದಲ್ಲಿ ಕೊರೋನ ತಗಲಿದೆ ಆರನೇ ಆಟಗಾರನಾಗಿದ್ದಾರೆ ಸಿಂಗ್. ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ಸಹಿತ ಇತರ ಐವರು ಆಟಗಾರರಿಗೆ ಆ.7ರಂದು ಸೋಂಕು ಇರುವುದು ದೃಢಪಟ್ಟಿತ್ತು.

ಬೆಂಗಳೂರಿನ ನ್ಯಾಶನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿರುವ ಸೋಂಕಿತ ಹಾಕಿ ಆಟಗಾರರಿಗೆ ದಿನಕ್ಕೆ ನಾಲ್ಕು ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಮವಾರ ರಾತ್ರಿಯ ತಪಾಸಣೆ ವೇಳೆ ಮನ್‌ದೀಪ್ ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ. ಇದು ಅವರಲ್ಲಿ ಕೊರೋನದ ಲಕ್ಷಣ ತೀವ್ರವಾಗುತ್ತಿರುವ ಸೂಚನೆಯಾಗಿತ್ತು. ತಕ್ಷಣವೇ ಅವರನ್ನು ಎಸ್‌ಎಸ್ ಸ್ಪರ್ಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸಾಯ್ ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News