ಪಶ್ಚಿಮಘಟ್ಟಗಳಲ್ಲಿ ಭೂಕುಸಿತ ತಡೆಗಟ್ಟಲು ಜಿಯೋ ಮ್ಯಾಪಿಂಗ್ : ಪಡುಬಿದ್ರಿಯಲ್ಲಿ ಸಚಿವ ಬೊಮ್ಮಾಯಿ ಹೇಳಿಕೆ

Update: 2020-08-11 15:46 GMT

ಪಡುಬಿದ್ರಿ, ಆ.11: ಪಶ್ಚಿಮಘಟ್ಟದಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಂಭವಿ ಸುವ ಭೂಕುಸಿತದಂತಹ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಜಿಯಾಲ ಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಜಿಯೋ ಮ್ಯಾಪಿಂಗ್ ಮೂಲಕ ಸರ್ವೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಡುಬಿದ್ರೆ ಬೀಚ್‌ನಲ್ಲಿ ಕಡ್ಕೊರೆತದಿಂದ ಆಗಿರುವ ಹಾನಿಯನ್ನು ಮಂಗಳ ವಾರ ವೀಕ್ಷಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತ ನಾಡುತಿದ್ದರು. ಪ್ರಧಾನ ಮಂತ್ರಿ ಜೊತೆ ಆ.10ರಂದು ನಡೆದ ವಿಡಿಯೋ ಕಾನ್ಫೆರೆನ್ಸ್ ಸಂದರ್ಭ ದಲ್ಲಿ ಕರ್ನಾಟಕದಲ್ಲಿ ಕಡಲ್ಕೊರೆತ ನಿಯಂತ್ರಿ ಸಲು ಹೆಚ್ಚಿನ ಅನುದಾನ ನೀಡ ಬೇಕು ಹಾಗೂ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ತಡೆಗಟ್ಟಲು ಕ್ರಮ ತೆಗೆದು ಕೊಳ್ಳಬೇಕು ಮತ್ತು ಅಂತಹ ಸ್ಥಳಗಳ ಲ್ಲಿರುವ ಮನೆಗಳನ್ನು ಸ್ಥಳಾಂತರ ಮಾಡಿ ಪುನವರ್ಸತಿ ಕಲ್ಪಿಸಬೇಕು ಎಂಬ ಬೇಡಿಕೆ ಪ್ರಸ್ತಾಪಿಸಲಾಗಿದೆ ಎಂದರು.

ಕೊರೋನ ಮತ್ತು ನೆರೆಗೆ ಸಂಬಂಧಿಸಿ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪ ಸತ್ಯಕ್ಕೆ ದೂರ ವಾದುದು. ಈಗಾಗಲೇ ಕೊರೋನಗೆ ರಾಜ್ಯ ಸರಕಾರ ಎನ್‌ಡಿಆರ್‌ಎಫ್ ನಿಧಿಯಿಂದ 350ಕೋಟಿ ರೂ. ಹಣವನ್ನು ಖರ್ಚು ಮಾಡುತ್ತಿದೆ. ನೆರೆ ಪರಿಹಾರಕ್ಕೂ ಯಾವುದೇ ರೀತಿ ಹಣ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದರು.

ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕದಳದಿಂದ ಒಟ್ಟು ನಾಲ್ಕು ತಂಡ ಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಮಂಗಳೂರು, ಬೆಳಗಾವಿ, ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಅದರ ಜೊತೆ 15 ಫೈಯರ್ ಫೋರ್ಸ್ ಯುನಿಟ್‌ಗಳನ್ನು ರಚಿಸಿ, ಜಿಲ್ಲಾಡಳಿತ ಸಹಕಾರ ನೀಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಈ ಬಾರಿಯ ಸ್ವಾತಂತ್ರೋತ್ಸವವನ್ನು ಕೇಂದ್ರ ಸರಕಾರದ ಕೋವಿಡ್ ಮಾರ್ಗ ಸೂಚಿ ಪ್ರಕಾರ ಆಚರಿಸಲಾಗುವುದು. ಈ ಆಚರಣೆಯಲ್ಲಿ ಧ್ವಜಾರೋಹಣ ಮಾತ್ರ ನೆರವೇರಿಸಲಾಗುವುದು. ಉಳಿದಂತೆ ಪೆರೆಡ್‌ಗಳು ಹಾಗೂ ಸೆಲ್ಯೂಟ್ ಗಳು ಇರುವುದಿಲ್ಲ. ಅದೇ ರೀತಿ ಸಾರ್ವಜನಿ ಕರಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕಾಪು ತಹಶಿಲ್ದಾರ್ ಮಹಮ್ಮದ್ ಇಸ್ಹಾಕ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಪ್ರೀತಿ ಗೆಹ್ಲೋಟ್, ತಾಪಂ ಸದಸ್ಯೆ ನೀತಾ ಗುರುರಾಜ್, ಪಕ್ಷದ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಂದಾಯ ನಿರೀಕ್ಷಕ ರವಿಶಂಕರ್, ಗ್ರಾಮ ಕರಣಿಕ ಶಾಮ್ ಸುಂದರ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಗೆ 10ಕೋಟಿ ರೂ. ಬಿಡುಗಡೆ

ಪ್ರಾಕೃತಿಕ ವಿಕೋಪ ನಿಧಿಗೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿಗಳ ಖಾತೆ ಯಲ್ಲಿ ಈಗಾಗಲೇ ಸುಮಾರು 3 ಕೋಟಿ ರೂ. ಹಣ ಇದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ತುರ್ತು ಕಾಮಗಾರಿ ಹಾಗೂ ಪ್ರವಾಹ ಪರಿಹಾರ ಕ್ಕಾಗಿ ಎನ್‌ಡಿಆರ್‌ಎಫ್‌ನಿಂದ 10 ಕೋಟಿ ರೂ. ಬಿಡುಗಡೆ ಮಾಡಲಾಗು ವುದು ಎಂದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಬ್ಬರದ ಅಲೆಗಳ ಮಧ್ಯೆ ಸಿಲುಕಿದ ಸಚಿವರು!

ಪಡುಬಿದ್ರಿ ಬೀಚ್‌ನಲ್ಲಿ ಅಲೆಗಳ ಅಬ್ಬರದಿಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಪಾದರಕ್ಷೆ ಸಮುದ್ರ ಪಾಲಾದ ಘಟನೆ ನಡೆಯಿತು. ಕಡಲ್ಕೊರೆತ ವೀಕ್ಷಣೆಯ ಬಳಿಕ ಸಚಿವರು, ಸಮುದ್ರದತ್ತ ತೆರಳಿದರು. ಈ ವೇಳೆ ಭಾರೀ ಗಾತ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ಸಚಿವರ ಕಾಲಿನಲ್ಲಿದ್ದ ಪಾದರಕ್ಷೆ ಸಮುದ್ರ ಪಾಲಾಯಿತು. ಇದರಿಂದ ವಿಚಲಿತರಾದ ಸಚಿವರು ಕೂಡಲೇ ಚಪ್ಪಲಿಯನು್ನ ಸಚಿವರು ಹಿಡಿಯಲು ಮುಂದಾದರು.

ಮತ್ತೆ ಮತ್ತೆ ಬೃಹತ್ ಅಲೆಗಳು ಅಪ್ಪಳಿಸುತ್ತಿರುವುದರಿಂದ ಅವರನ್ನು ಭದ್ರತಾ ಸಿಬ್ಬಂದಿ, ಜಿಪಂ ಅಧ್ಯಕ್ಷೆ ದಿನಕರ ಬಾಬು ಹಾಗೂ ಪಕ್ಷದ ಮುಖಂಡ ಉದಯ ಕುಮಾರ್ ಶೆಟ್ಟಿ ತಡೆದು ಮೇಲಕ್ಕೆ ಕರೆದುಕೊಂಡು ಬಂದರು. ಮರುಕ್ಷಣವೇ ಇನ್ನೊಂದು ಅಲೆ ಬಂದು ಅವರ ಪಾದರಕ್ಷೆ ದಡ ಸೇರುವಂತೆ ಮಾಡಿತು. ಅಲೆಯ ರಭಸಕ್ಕೆ ಅವರ ಬಟ್ಟೆಗಳು ಒದ್ದೆಯಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News