ವೇತನ ತಡೆ ಖಂಡಿಸಿ ಬಿಸಿಯೂಟ ನೌಕರರಿಂದ ಧರಣಿ

Update: 2020-08-11 16:16 GMT

ಕುಂದಾಪುರ, ಆ.11: ರಾಜ್ಯ ಸರಕಾರವು ಶಿಕ್ಷಣ ಇಲಾಖೆಯಡಿಯಲ್ಲಿರುವ ಬಿಸಿಯೂಟ ನೌಕರರಿಗೆ ಕಳೆದ ಎಪ್ರಿಲ್ ತಿಂಗಳಿನಿಂದ ವೇತನ ನೀಡದೇ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಇಂದು ಕುಂದಾಪುರ ತಹಸಿಲ್ದಾರರ ಕಛೇರಿ ಮುಂದೆ ಧರಣಿ ನಡೆಸಲಾಯಿತು.

ಬಿಸಿಯೂಟ ನೌಕರರಿಗೆ ಎಪ್ರಿಲ್ನಿಂದ ಶಾಲೆ ಪ್ರಾರಂಭವಾಗುವವರೆಗೆ ವೇತನ ಪಾವತಿ ಮಾಡಬೇಕು. ನೌಕರರನ್ನು ಖಾಯಂ ಮಾಡಿ ಶಾಸನಾ ತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ 6ತಿಂಗಳ ವರೆಗೆ ಪಡಿತರ ಒದಗಿಸಿ ನೌಕರರಿಗೆ ಲಾಕ್ಡೌನ್ ಅವಧಿಯಿಂದ 7500ರೂ.ನಂತೆ ಮುಂದಿನ 6 ತಿಂಗಳವರೆಗೆ ನೀಡಬೇಕು.

ನೌಕರರಿಗೆ ಎಲ್ಐಸಿ ಆಧಾರಿತ ಪೆನ್ಶನ್ ನಿಗದಿ ಮಾಡಬೇಕು. ಕೋವಿಡ್ 19 ವೈದ್ಯಕೀಯ ತುರ್ತು ಸ್ಥಿತಿ ಎಂದು ಪರಿಗಣಿಸಿ ನೌಕರರ ಕುಟುಂಬಗಳಿಗೆ ಚಿಕಿತ್ಸೆ ಸರಕಾರವೇ ಭರಿಸಬೇಕು. ಕ್ವಾರಂಟೈನ್ನಲ್ಲಿರುವವರಿಗೆ ಅಡುಗೆ ಮಾಡಿ ಬಡಿಸುತ್ತಿರುವ ನೌಕರರಿಗೆ ವೇತನ ಪಾವತಿ ಮಾಡಬೇಕು. ಭಾರತ ಕಾರ್ಮಿಕ ಸಮ್ಮೇಳನದ ಶಿಫಾರಸ್ಸು ಜಾರಿ ಮಾಡಬೇಕು ಎಂದು ಧರಣಿನಿರತರು ಸರಕಾರ ವನ್ನು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಮಹಾ ಬಲ ವಡೇರಹೋಬಳಿ, ಸುರೇಶ್ ಕಲ್ಲಾಗರ, ನೌಕರರ ಸಂಘದ ತಾಲೂಕು ಮುಖಂಡರಾದ ನಾಗರತ್ನ, ಆಶಾ, ಮೀನಾಕ್ಷಿ, ಗೀತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News