ಚೀನಾ: ಶೀತಲೀಕೃತ ಸಿಗಡಿ ಪ್ಯಾಕೇಜಿಂಗ್‌ನಲ್ಲಿ ಕೊರೋನ ವೈರಸ್!

Update: 2020-08-11 16:18 GMT

ಬೀಜಿಂಗ್, ಆ. 11: ಬಂದರು ನಗರ ದಾಲಿಯನ್‌ನಿಂದ ಬಂದ ಶೀತಲೀಕೃತ ಸಮುದ್ರೋತ್ಪನ್ನಗಳ ಪ್ಯಾಕೇಜಿಂಗ್ ‌ನಲ್ಲಿ ಕೊರೋನ ವೈರಸ್ ಇರುವುದನ್ನು ಚೀನಾದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಸ್ಥಳೀಯಾಡಳಿತದ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ದಾಲಿಯನ್ ನಗರದಲ್ಲಿ ಇತ್ತೀಚೆಗೆ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.

ಪೂರ್ವ ಚೀನಾದ ಶಾಂಗ್‌ಡಾಂಗ್ ಪ್ರಾಂತದ ಬಂದರು ನಗರ ಯನ್‌ ಟಾಯಿ ಎಂಬಲ್ಲಿರುವ ಮೂರು ಕಂಪೆನಿಗಳು ಖರೀದಿಸಿರುವ ಶೀತಲೀಕೃತ ಸಮುದ್ರೋತ್ಪನ್ನಗಳ ಹೊರ ಪ್ಯಾಕೇಜಿಂಗ್‌ನಲ್ಲಿ ವೈರಸ್ ಪತ್ತೆಯಾಗಿದೆ.

ಈ ಸಮುದ್ರೋತ್ನನ್ನವನ್ನು ವಿದೇಶವೊಂದರಿಂದ ಆಮದು ಮಾಡಿಕೊಳ್ಳಲಾಗಿತ್ತು ಹಾಗೂ ಅದನ್ನು ಡಾಲಿಯನ್ ಬಂದರಿನಲ್ಲಿ ಇಳಿಸಲಾಗಿತ್ತು ಎಂದು ಯನ್‌ಟಾಯಿ ನಗರಾಡಳಿತವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಕೊರೋನ ವೈರಸ್ ಎಲ್ಲಿ ತಗಲಿಕೊಂಡಿದೆ ಎನ್ನುವುದನ್ನು ಅದು ತಿಳಿಸಿಲ್ಲ.

ಲಿಯವೊನಿಂಗ್ ಪ್ರಾಂತದ ಪ್ರಮುಖ ಬಂದರು ಆಗಿರುವ ಡಾಲಿಯನ್‌ನ ಕಸ್ಟಮ್ಸ್ ಅಧಿಕಾರಿಗಳು, ಇಕ್ವೆಡಾರ್‌ನಿಂದ ಆಮದು ಮಾಡಿಕೊಳ್ಳಲಾಗಿರುವ ಶೀತಲೀಕೃತ ಸಿಗಡಿಯ ಪ್ಯಾಕೇಜಿಂಗ್‌ನಲ್ಲಿ ಕೊರೋನ ವೈರಸ್ ಇರುವುದನ್ನು ಜುಲೈಯಲ್ಲಿ ಪತ್ತೆಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News