ಬಂಟ್ವಾಳ: ತೌಹೀದ್ ಶಾಲೆಗೆ ಉತ್ತಮ ಫಲಿತಾಂಶ

Update: 2020-08-11 17:19 GMT

ಬಂಟ್ವಾಳ, ಆ.11: ಬಂಟ್ವಾಳ ಕೆಳಗಿನ ಪೇಟೆ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ ಬರೆದ 81 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 57 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇಕಡಾ 94ರಷ್ಟು ಫಲಿತಾಂಶ ಬಂದಿದೆ.

ವಿದ್ಯಾರ್ಥಿನಿಯರಾದ ಮೈಮುನಾ 589 (94.24), ಮರಿಯಮ್ ನಾಫಿಯಾ 584 (93.44), ಸಲ್ವಾ ಶಿರಿನ್ 580 (92.80), ಆಯೊಷಾ ತಬ್ಸೀರಾ 576 (92.16), ಖತೀಜ ನಸೀಫ 574 (91.84) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News