ಎಸೆಸೆಲ್ಸಿ : ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.97 ಫಲಿತಾಂಶ

Update: 2020-08-11 18:01 GMT
ಚಿರಶ್ರೀ, ಶ್ರುತಿಕಾ, ಉನ್ನತಿ

ಮಂಗಳೂರು, ಆ.11: ಎಡಪದವುನಲ್ಲಿರುವ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.97.87ರಷ್ಟು ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ 47 ವಿದ್ಯಾರ್ಥಿಗಳಲ್ಲಿ 46 ಮಂದಿ ಉತ್ತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ಇಬ್ಬರು, ಪ್ರಥಮ ಶ್ರೇಣಿಯಲ್ಲಿ 31, ದ್ವಿತೀಯ ಶ್ರೇಣಿಯಲ್ಲಿ 11, ತೃತೀಯ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಶಾಲೆಯಲ್ಲಿ 589 (ಶೇ.94.24), 573 (ಶೇ.91.68), 548 (ಶೇ.87.68) ಕ್ರಮವಾಗಿ ಅತಿಹೆಚ್ಚು ಅಂಕ ಪಡೆದಿದ್ದಾರೆ.

ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿರಶ್ರೀ 589 (ಶೇ.94.24) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ಕನ್ನಡ-125, ಇಂಗ್ಲಿಷ್-100, ಹಿಂದಿ-99, ಗಣಿತ-96, ವಿಜ್ಞಾನ-71, ಸಮಾಜವಿಜ್ಞಾನ-98 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿನಿ ಉನ್ನತಿ 573 (ಶೇ.91.68)ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕನ್ನಡ ವಿಷಯಕ್ಕೆ 116, ಇಂಗ್ಲಿಷ್-92, ಹಿಂದಿ-99, ಗಣಿತ-96, ವಿಜ್ಞಾನ-85, ಸಮಾಜವಿಜ್ಞಾನ-85 ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿನಿ ಶ್ರುತಿಕಾ 548 (ಶೇ.87.68) ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ-103, ಇಂಗ್ಲಿಷ್-89, ಹಿಂದಿ-98, ಗಣಿತ-81, ವಿಜ್ಞಾನ-88, ಸಮಾಜವಿಜ್ಞಾನ-89 ಅಂಕ ಗಳಿಸಿದ್ದಾರೆ ಎಂದು ಸಂಸ್ಥೆಯ ಮುಹಮ್ಮದ್ ಬ್ಯಾರಿ, ನಂದಾ ಉಮಾಪ್ರಿಯ ಗಡಿಯಾರ್, ಫ್ಲೋರಿ ತೌರೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News