'ಮೋದಿ ಹೈ ತೊ ಮುಮ್ಕಿನ್ ಹೈ': ಜಿಡಿಪಿ ಕುರಿತು ನಾರಾಯಣ ಮೂರ್ತಿ ಎಚ್ಚರಿಕೆಗೆ ರಾಹುಲ್ ಟ್ವೀಟ್

Update: 2020-08-12 09:45 GMT

ಹೊಸದಿಲ್ಲಿ, ಆ.12: ಕೊರೋನ ವೈರಸ್ ಕಾಯಿಲೆಯಿಂದಾಗಿ ಭಾರತದ ಜಿಡಿಪಿ ಬೆಳವಣಿಗೆಯು ಸ್ವಾತಂತ್ರದ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಯಬಹುದು ಎಂಬ ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಎಚ್ಚರಿಕೆಯನ್ನೇ ಆಧರಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಲೋಗನ್‌ನ್ನು ಬಳಸಿಕೊಂಡೇ ಕೇಂದ್ರ ಸರಕಾರವನ್ನು ಟೀಕಿಸಿದ ರಾಹುಲ್,"ಮೋದಿ ಹೈ ತೋ ಮುಮ್ಕಿನ್ ಹೈ(ಮೋದಿ ಇದ್ದರೆ, ಎಲ್ಲವೂ ಸಾಧ್ಯ)''ಎಂದು ಐಟಿ ದೂರದೃಷ್ಟಿಯ ಟೀಕೆಗಳ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟಿಸಿದ್ದಾರೆ.

ಇನ್‌ಫೋಸಿಸ್ ಸಂಸ್ಥಾಪಕ ಮೂರ್ತಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)1947ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆಯ ಕುರಿತು ಸೋಮವಾರ ಆತಂಕ ವ್ಯಕ್ತಪಡಿಸಿದ್ದರು. ಭಾರತದ ಜಿಡಿಪಿ ಕನಿಷ್ಠ ಶೇ.5 ಕ್ಕೆ ಇಳಿಯುವ ನಿರೀಕ್ಷೆಯಿದೆ.1947ರ ಬಳಿಕ ಕನಿಷ್ಠ ಜಿಡಿಪಿಗೆ ಕುಸಿಯುವ ಭೀತಿಯಿದೆ.ಆರ್ಥಿಕತೆಯನ್ನು ಹಳಿಗೆ ತರಲೇಬೇಕಾಗಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News