“ಇಂದು ಕೃಷ್ಣ ಜೈಲಿ‍ನಲ್ಲಿ ಹುಟ್ಟಿದ ದಿನ, ನಿಮಗೆ ಬೇಲ್ ಬೇಕೇ?”: ಕೊಲೆ ಪ್ರಕರಣದ ದೋಷಿಗೆ ಸಿಜೆಐ ಪ್ರಶ್ನೆ

Update: 2020-08-12 09:53 GMT

ಹೊಸದಿಲ್ಲಿ: ಕೊಲೆ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಧರ್ಮೇಂದ್ರ ವಲ್ವಿ ಎಂಬ ವ್ಯಕ್ತಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅಪರಾಧಿಗೆ ಕೆಲ ಪ್ರಶ್ನೆಗಳನ್ನು ಕೇಳಿದರು. “ನಿಮಗೆ ಬೇಲ್ ಬೇಕೇ ಅಥವಾ ಜೈಲ್ ? ಇವತ್ತು ಶ್ರೀ ಕೃಷ್ಣ ಜೈಲಿನಲ್ಲಿ ಹುಟ್ಟಿದ ದಿನ. ನಿಮಗೆ ಜೈಲು ಬಿಟ್ಟು ಹೋಗಬೇಕೇ?'' ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಆಗ ಅಪರಾಧಿ ಪರ ವಕೀಲರು ಹೌದೆಂದು ಉತ್ತರಿಸಿದಾಗ ``ಒಳ್ಳೆಯದು, ನೀವು ಧರ್ಮಕ್ಕೆ ಹೆಚ್ಚಾಗಿ ಅಂಟಿಕೊಂಡಿಲ್ಲ'' ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿಗಳು ಜಾಮೀನು ಮಂಜೂರುಗೊಳಿಸಿದರು.

ಅಪರಾಧಿ ಧರ್ಮೇಂದ್ರ ಕಾಂಗ್ರೆಸ್ ಐ ಪಕ್ಷದ ಸದಸ್ಯನಾಗಿದ್ದು ಆತ ಹಾಗೂ ಇತರ ಐದು ಮಂದಿ ಪಕ್ಷ ಕಾರ್ಯಕರ್ತರು ತಮ್ಮ ರಾಜಕೀಯ ಎದುರಾಳಿಯಾಗಿದ್ದ ಬಿಜೆಪಿ ವ್ಯಕ್ತಿಯೊಬ್ಬನನ್ನು 1994ರಲ್ಲಿ ಕೊಲೆಗೈದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.  ವಿಚಾರಣಾ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದರೆ ಮುಂದೆ 2017ರಲ್ಲಿ ಬಾಂಬೆ ಹೈಕೋರ್ಟ್ ಈ  ಶಿಕ್ಷೆಯನ್ನು ಎತ್ತಿ ಹಿಡಿದತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಪೀಲು ವಿಚಾರಣೆಗೆ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News