ಬಿಹಾರ: ಜೆಡಿಯು ಮುಖಂಡನ ಗುಂಡಿಕ್ಕಿ ಹತ್ಯೆ

Update: 2020-08-12 09:55 GMT

ಪಾಟ್ನಾ, ಆ.12: ಜೆಡಿಯುನ 50 ವಯಸ್ಸಿನ ಮುಖಂಡನನ್ನು ದುಷ್ಕರ್ಮಿಗಳು ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 8ರ ಸುಮಾರಿಗೆ ಘಟನೆ ನಡೆದಿತ್ತು. ಜೆಡಿಯುನ ಗಮ್‌ಹಾರಿಯಾ ಬ್ಲಾಕ್ ಅಧ್ಯಕ್ಷರಾಗಿರುವ ಅಶೋಕ್ ಯಾದವ್ ಜೋಗ್ಬಾನಿ ಗ್ರಾಮದ ಅಂಗಡಿಯ ಸಮೀಪ ನಿಂತುಕೊಂಡಿದ್ದಾಗ ಮೋಟಾರ್‌ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಅತ್ಯಂತ ಹತ್ತಿರದಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಉಪವಿಭಾಗದ ಅಧಿಕಾರಿ ವಶಿ ಅಹ್ಮದ್ ಹೇಳಿದ್ದಾರೆ.
ಯಾದವ್‌ರನ್ನು ಸಪೌಲ್ ಸದಾರ್ ಹಾಸ್ಪಿಟಲ್‌ಗೆ ಕರೆದೊಯ್ಯಲಾಗಿದ್ದರೂ ಅಲ್ಲಿ ತಲುಪುವ ವೇಳೆ ಅವರು ಮೃತಪಟ್ಟಿದ್ದಾರೆ.ಅಶೋಕ್ ಮೃತದೇಹವನ್ನು ಮಾಧೇಪುರ ಹಾಸ್ಪಿಟಲ್‌ಗೆ ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News