ಗೋಮೂತ್ರ, ಸಗಣಿ ಔಷಧಿ ಎಂದು ಹೇಳಿ ಬಿಜೆಪಿ ನಗೆಪಾಟಲಿಗೀಡಾಗುತ್ತಿದೆ: ಮೇಘಾಲಯ ರಾಜ್ಯಪಾಲ ತಥಾಗತ ರಾಯ್

Update: 2020-08-12 12:09 GMT

ಕೊಲ್ಕತ್ತಾ: ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಅವರಿಗೆ ತಮ್ಮ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಇಚ್ಛೆಯಿದೆ. ಆದರೆ ತಮ್ಮ ಸ್ವಪಕ್ಷೀಯರಿಗೆ ಅವರದ್ದೊಂದು ಸಲಹೆಯಿದೆ- ಗೋ ಸಗಣಿ ಹಾಗೂ ಗೋಮೂತ್ರ ಕೋವಿಡ್-19 ಸೋಂಕಿಗೆ ಔಷಧಿಯಾಗಬಲ್ಲದು ಎಂದು ಹೇಳುವುದನ್ನು ನಿಲ್ಲಿಸಿ ಎಂಬುದೇ ಅವರ ಸಲಹೆ.

ಜಾಧವಪುರ್ ವಿವಿಯ ಮಾಜಿ ಪ್ರೊಫೆಸರ್ ಹಾಗೂ ಅಲ್ಲಿನ ನಿರ್ಮಾಣ ಇಂಜಿನಿಯರಿಂಗ್ ವಿಭಾಗದ ಸ್ಥಾಪಕರಾಗಿರುವ 74 ವರ್ಷದ ರಾಯ್ ಪ್ರಕಾರ ಗೋಮೂತ್ರ ಹಾಗೂ ಸಗಣಿಯ ಔಷಧೀಯ ಗುಣಗಳ ಕುರಿತಂತೆ ಬಿಜೆಪಿಯ ಹೇಳಿಕೆಗಳೆಲ್ಲವೂ `ಅವೈಜ್ಞಾನಿಕ.' ಅಷ್ಟೇ ಅಲ್ಲ, ಈ ಕುರಿತಾದ ತಮ್ಮ ಹೇಳಿಕೆಗಳ ಮೂಲಕ ಬಿಜೆಪಿ ನಾಯಕರು ನೆಗಪಾಟಲಿಗೀಡಾಗುತ್ತಿದ್ದರೆ ಎಂದು ಅವರು ಹೇಳುತ್ತಾರೆ.

“ಕೊರೋನವೈರಸ್ ನಿರೋಧಕ ಶಕ್ತಿಗಾಗಿ ಗೋಮೂತ್ರ ಸೇವನೆ ಅಥವಾ ಸಗಣಿ ಒಳ್ಳೆಯದು ಎಂದು ನಮ್ಮ ನಾಯಕರು ಹೇಳುತ್ತಿರುವುದು ನೋಡಿದಾಗ ಬೇಸರವಾಗುತ್ತದೆ. ದನದ ಹಾಲಿನಲ್ಲಿ ಚಿನ್ನವಿದೆ ಎಂಬಿತ್ಯಾದಿ ಹೇಳಿಕೆಗಳು ಪಕ್ಷವನ್ನು ನಗೆಪಾಟಲಿಗೀಡು ಮಾಡುತ್ತವೆ'' ಎಂದು ಅವರು ಹೇಳಿದರು.

ತಾವು ಹೇಳಿಕೆಗಳ ವಿರುದ್ಧವಷ್ಟೇ ಮಾತನಾಡುತ್ತಿದ್ದೇನೆಯೇ ವಿನಹ ಯಾರ ವಿರುದ್ಧವೂ ಅಲ್ಲ ಎಂದು ರಾಯ್ ಹೇಳುತ್ತಾರಾದರೂ ಗೋಮೂತ್ರ ಕೊರೋನಾದಿಂದ ರಕ್ಷಿಸುತ್ತದೆ ಎಂಬ ಹೇಳಿಕೆಯನ್ನು  ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ನೀಡಿದ್ದರೆಂಬುದನ್ನು ಸ್ಮರಿಸಬಹುದು. ಗೋಮೂತ್ರದಲ್ಲಿ ಚಿನ್ನವಿದೆ ಎಂಬ ಹೇಳಿಕೆಯನ್ನೂ ಕಳೆದ ವರ್ಷ ಘೋಷ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News