ದ.ಕ. ಜಿಲ್ಲೆ : 229 ಮಂದಿಗೆ ಕೊರೋನ ಸೋಂಕು, ಮತ್ತೆ ಏಳು ಮಂದಿ ಕೋವಿಡ್‌ಗೆ ಬಲಿ

Update: 2020-08-12 14:33 GMT

ಮಂಗಳೂರು, ಆ.12: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ನಾಗಾಲೋಟ ಮುಂದುವರಿದಿದೆ. ಬುಧವಾರ 229 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಮತ್ತೆ ಏಳು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಬುಧವಾರ ಮೃತಪಟ್ಟ ಏಳು ಮಂದಿಯ ಪೈಕಿ ಇಬ್ಬರು ಮಂಗಳೂರಿನವರು. ಇನ್ನು ಮೂಡುಬಿದಿರೆ, ಬಂಟ್ವಾಳ ತಲಾ ಓರ್ವರು ಸೇರಿದಂತೆ ಹೊರ ಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಬಲಿಯಾದವ ಸಂಖ್ಯೆ 244ಕ್ಕೆ ಏರಿಕೆಯಾಗಿದೆ.

229 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಬುಧವಾರ ಮತ್ತೆ 229 ಮಂದಿ ಯಲ್ಲಿ ಸೋಂಕು ಪತ್ತೆಯಾಗಿದೆ. ಮಂಗಳೂರು-133, ಬಂಟ್ವಾಳ-45, ಪುತ್ತೂರು-22, ಬೆಳ್ತಂಗಡಿ-14, ಸುಳ್ಯ-5, ಹೊರಜಿಲ್ಲೆಯ 10 ಮಂದಿ ಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಸೋಂಕಿತರ ಪೈಕಿ ಸಾಮಾನ್ಯ ಶೀತ ಲಕ್ಷಣ ಇರುವವರ ಸಂಖ್ಯೆಯೇ ಅಧಿಕ (113)ಇದೆ. ಸೋಂಕಿತರ ಸಂಪರ್ಕದಲ್ಲಿದ್ದ 36 ಮಂದಿ, ತೀವ್ರ ಉಸಿರಾಟ ತೊಂದರೆ-11, ಸೋಂಕಿನ ಮೂಲ ಪತ್ತೆಯಾಗದ ಪ್ರಕರಣ-69 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,825ಕ್ಕೆ ಏರಿಕೆಯಾಗಿದೆ.

498 ಮಂದಿ ಕೊರೋನ ಮುಕ್ತ: ಸಮಾಧಾನಕರ ಬೆಳವಣಿಗೆಯಲ್ಲಿ ಜಿಲ್ಲೆಯಲ್ಲಿ ದಾಖಲಾದ ಕೊರೋನ ಸೋಂಕಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ 500ರ ಆಸುಪಾಸಿನಲ್ಲಿ ಕೊರೋನ ಸೋಂಕಿತರು ಗುಣಮುಖರಾಗುತ್ತಿರುವುದು ಜಿಲ್ಲೆಯ ಜನತೆಯ ಆತಂಕ ದೂರ ಮಾಡಿದೆ. ಬುಧವಾರ ಮತ್ತೆ 498 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ 89 ಮಂದಿ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 364, ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿದ್ದ 45 ಮಂದಿ ಕೊರೋನ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಮುಕ್ತರಾದವರ ಸಂಖ್ಯೆ 5,232ಕ್ಕೆ ಏರಿದೆ. ಜಿಲ್ಲೆಯಲ್ಲಿ 2,349 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 59,750 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, 51,925 ನೆಗೆಟಿವ್ ಮತ್ತು 7,825 ಪಾಸಿಟಿವ್ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News