ವಿಶ್ವ ಆನೆ ದಿನ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

Update: 2020-08-12 16:40 GMT

ಉಡುಪಿ, ಆ.12: ವಿಶ್ವ ಆನೆ ದಿನದ ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ‘ಪ್ರಕೃತಿಯಲ್ಲಿ ಆನೆಯ ಪ್ರಾಮುಖ್ಯತೆ’ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 15 ವರ್ಷದ ಒಳಗಿನ ಮಕ್ಕಳಿಂದ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಬುಧವಾರ ಏರ್ಪಡಿಸಿದ್ದು, ಪ್ರವೇಶಾರ್ಥಿಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಆಹ್ವಾನಿಸಲಾಗಿತ್ತು.

ಈ ಸ್ಪರ್ಧೆಗೆ ಒಟ್ಟು 1496 ಚಿತ್ರಗಳು ಬಂದಿದ್ದು, ಇವುಗಳಲ್ಲಿ ಅಂತಿಮವಾಗಿ ಎರಡು ವರ್ಗಗಳಲ್ಲಿ ಆಯ್ಕೆ ಮಾಡಿ ಬಹುಮಾನವನ್ನು ನೀಡಲಾಗಿದೆ.

10 ವರ್ಷದ ಒಳಗಿನವರು: ಪ್ರಥಮ: ಸಾತ್ವಿಕ್ ಕೆ. ಆಚಾರ್ಯ, ಕಾರ್ಕಳ, ದ್ವಿತೀಯ: ಧೃತಿ ಎಸ್. ಉಡುಪಿ, ತೃತೀಯ: ನಿಲಿಷ್ಕಾ ಕೆ. ಪುತ್ತೂರು.

15 ವರ್ಷದ ಒಳಗಿನವರು: ಪ್ರಥಮ: ಕೆ.ಪ್ರತಿಷ್ಠಾ ಶೇಟ್ ಉಡುಪಿ, 2.ದ್ವಿತೀಯ: ಶರಣ್ಯ ಭಟ್ ಬ್ರಹ್ಮಾವರ, ತೃತೀಯ: ಮೋಕ್ಷಿತ್ ಸುರೇಶ್ ಮಂಗಳೂರು ಮತ್ತು ಹಾಮಿದ ವಫಾಯು ಪುತ್ತೂರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಹಾಗೂ ಅವರ ಪೋಷಕರಿಗೆ ಮಂಗಳೂರು ವೃತ್ತದ ಮುಖ್ಯಅರಣ್ಯ ಸಂರಕ್ಷಣಾಧಿಾರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News