ಖಿನ್ನತೆಯಿಂದ ಬಳಲುತ್ತಿರುವ ಅರ್ಧದಷ್ಟು ಯುವಜನತೆ: ವಿಶ್ವ ಕಾರ್ಮಿಕ ಸಂಘಟನೆ

Update: 2020-08-12 17:44 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಆ. 12: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಗತ್ತಿನ ಯುವ ಜನಸಂಖ್ಯೆಯ ಅರ್ಧದಷ್ಟು ಮಂದಿ ಖಿನ್ನತೆಗೊಳಗಾಗಿದ್ದಾರೆ ಹಾಗೂ ಮೂರನೇ ಒಂದಕ್ಕೂ ಅಧಿಕ ಭಾಗದಷ್ಟು ಮಂದಿ ತಮ್ಮ ಭವಿಷ್ಯದ ಜೀವನದ ಬಗ್ಗೆ ಅನಿಶ್ಚಿತತೆ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆಯ ಘಟಕವಾಗಿರುವ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ ನಡೆಸಿರುವ ಸಮೀಕ್ಷೆಯೊಂದು ತಿಳಿಸಿದೆ.

ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಯುವಕರು ಸಾಂಕ್ರಾಮಿಕದ ಗಂಭೀರ ಹಾಗೂ ದೀರ್ಘಾವಧಿಯ ವ್ಯತಿರಿಕ್ತ ಪರಿಣಾಮಗಳಿಂದ ಬಳಲುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಸಂಘಟನೆಯ ‘ಯುವಕರು ಮತ್ತು ಕೋವಿಡ್-19: ಉದ್ಯೋಗಗಳು, ಶಿಕ್ಷಣ, ಹಕ್ಕುಗಳು ಮತ್ತು ಮಾನಸಿಕ ಸಮತೋಲನದ ಮೇಲೆ ಪರಿಣಾಮ’ ಎಂಬ ಹೆಸರಿನ ವರದಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News