ಪುತ್ತೂರು, ಕಡಬ: ಮತ್ತೆ 14 ಮಂದಿಗೆ ಕೊರೋನ ಪಾಸಿಟಿವ್

Update: 2020-08-13 06:07 GMT

ಪುತ್ತೂರು, ಆ.13: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ 14 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ಕರ್ಮಲ ನಿವಾಸಿ 43 ವರ್ಷದ ಮಹಿಳೆ, ತೆಂಕಿಲ ನಿವಾಸಿಗಳಾದ 72 ವರ್ಷದ ಪುರುಷ, 58 ವರ್ಷದ ಪುರುಷ, ಬಪ್ಪಳಿಗೆ ನಿವಾಸಿ 56 ವರ್ಷದ ಮಹಿಳೆ, ನೆಹರೂ ನಗರ ನಿವಾಸಿ 40 ವರ್ಷದ ಪುರುಷ, ಮೊಟ್ಟೆತ್ತಡ್ಕ ನಿವಾಸಿ 45 ವರ್ಷದ ಮಹಿಳೆ, ದರ್ಬೆ ನಿವಾಸಿ 24 ವರ್ಷದ ಯುವಕ, ಕೃಷ್ಣನಗರ ನಿವಾಸಿ 68 ವರ್ಷದ ಪುರುಷ, ಬನ್ನೂರು ಗ್ರಾಮದ ನಿವಾಸಿ 22 ವರ್ಷದ ಯುವಕ, 34ನೇ ನೆಕ್ಕಿಲಾಡಿ ಗ್ರಾಮದ ನಿವಾಸಿ 36 ವರ್ಷದ ಪುರುಷ, ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ 62 ವರ್ಷದ ಮಹಿಳೆ ಹಾಗೂ ಕಾವು ಮಾಡ್ನೂರು ನಿವಾಸಿ 55 ವರ್ಷದ ಪುರುಷರೊಬ್ಬರಲ್ಲಿ ಕೊರೋನ ದೃಢಪಟ್ಟಿದೆ.

ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ 25 ವರ್ಷದ ಯುವತಿ, ಕೌಕ್ರಾಡಿ ನಿವಾಸಿ 20 ವರ್ಷದ ಯುವಕನೊಬ್ಬನಲ್ಲಿ ಇಂದು ಕೊರೋನ ಸೋಂಕು ಪತ್ತೆಯಾಗಿದೆ.

ಇಂದಿನ 14 ಪಾಸಿಟಿವ್ ಪ್ರಕರಣಗಳು ಸೇರಿ ಉಭಯ ತಾಲೂಕುಗಳಲ್ಲಿ ದೃಢಪಟ್ಟ ಒಟ್ಟು ಸೋಂಕಿತರ ಸಂಖ್ಯೆ 424ಕ್ಕೆ ಏರಿಕೆಯಾಗಿದೆ. ಆರು ಮಂದಿ ಸೋಂಕಿತರು ಸಾವನಪ್ಪಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News