ಪ್ರವಾದಿ ನಿಂದನೆ, ಬೆಂಗಳೂರು ಗಲಭೆಗೆ ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಖಂಡನೆ

Update: 2020-08-13 14:30 GMT

ಮಂಗಳೂರು : ಪ್ರವಾದಿ ನಿಂದನೆ ಸಹಿಸಲಾರದ ಕೃತ್ಯವಾಗಿದೆ. ಮುಸ್ಲಿಮರು ತನ್ನ ಸರ್ವಸ್ವಕ್ಕಿಂತಲೂ ಪ್ರವಾದಿಯವರನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಧಾರ್ಮಿಕ ‌ಭಾವನೆ ಕೆದಕಿ ಅಶಾಂತಿ, ಕೋಮು ಗಲಭೆ ಉಂಟು ಮಾಡಿದ ಅಪರಾಧಿಗೆ ಗರಿಷ್ಠ ಶಿಕ್ಷೆ ಆಗಲೇಬೇಕು ಮತ್ತು ಬೆಂಗಳೂರು ಗಲಭೆಯನ್ನು ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ.

ಪ್ರತಿಭಟಿಸುವ ಹಕ್ಕಿದೆಯಾದರೂ ಕಾನೂನು ಕೈಗೆತ್ತಿಕೊಳ್ಳುವುದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವುದು ಅಪರಾಧವಾಗಿದೆ. ಅದು ಇಸ್ಲಾಮಿನ ಆದರ್ಶಕ್ಕೂ ವಿರುದ್ಧವಾಗಿದೆ. ಶಾಂತಿ, ಸಹನೆ, ಅಹಿಂಸೆಯನ್ನೇ ಜೀವನದಲ್ಲಿ ಅಳವಡಿಸಿಕೊಂಡಿದ್ದ ಪ್ರವಾದಿಯವರ ಮಾದರಿಗೆ ತದ್ವಿರುದ್ಧವಾಗಿದೆ. ನಿಂದನೆ ಮಾಡಿದ ಅಪರಾಧಿಯನ್ನೂ ಕೂಡಲೇ ಬಂಧಿಸಿ ಕ್ರಮ ಜರುಗಿಸುತ್ತಿದ್ದರೆ ಇಷ್ಟೆಲ್ಲ ಅನಾಹುತಗಳನ್ನು ತಡೆಯಬಹುದಿತ್ತು. ಕಾನೂನು ಪಾಲಕರನ್ನು ಗೌರವಿಸಿ ಶಾಂತಿ ಕಾಪಡಬೇಕು. ಕೆಲವು ಮಾಧ್ಯಮಗಳು ಶಾಂತಿ ನೆಲೆಸಲು ಪ್ರಯತ್ನಿಸುವುದನ್ನು ಮರೆತು ಇಡೀ ಸಮಾಜವನ್ನು ಪುಂಡರನ್ನಾಗಿ ತೋರಿಸುವ ಆತುರದಲ್ಲಿ ನಿರತವಾಗಿರುವುದು ಖೇದಕರೆಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಶಕ್ಷರಾದ ಸಯ್ಶದ್ ಅಮೀರ್ ತಂಙಳ್ ಕಿನ್ಶ ಹಾಗೂ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News