ಉಡುಪಿ: ಆರೋಗ್ಯ ಇಲಾಖೆಯಲ್ಲಿ ತಾತ್ಕಾಲಿಕ ಹುದ್ದೆಗೆ ನೇರ ಸಂದರ್ಶನ

Update: 2020-08-13 15:18 GMT

ಉಡುಪಿ, ಆ.13: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗಾಗಿ ಪ್ರಯೋಗಶಾಲಾ ತಂತ್ರಜ್ಞರ (20 ಹುದ್ದೆ) ದತ್ತಾಂಶ ನಮೂದಕರ (20 ಹುದ್ದೆ) ಗಳಿಗೆ ಆ.14ರಿಂದ 17ರವರೆಗೆ ನೇರ ಸಂದರ್ಶನ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಮತ್ತು ದೃಡೀಕೃತ ದಾಖಲಾತಿಗಳೊಂದಿಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಳ ಕಚೇರಿ ಅಜ್ಜರಕಾಡು ಇಲಿ್ಲ ಸಂದರ್ಶನಕ್ಕೆ ಹಾಜರಾಗಬಹುದು.

ಪ್ರಯೋಗಶಾಲಾ ತಂತ್ರಜ್ಞ ಹುದ್ದೆಗೆ ಡಿಎಂಎಲ್‌ಟಿ/ಬಿಎಂಎಲ್‌ಟಿ ಯವರಿಗೆ ಪ್ರಥಮ ಆದ್ಯತೆ ಅಥವಾ ಎಂ.ಎಸ್ಸಿ ನರ್ಸಿಂಗ್ /ಬಿ.ಎಸ್ಸಿ ನರ್ಸಿಂಗ್/ಜಿಎನ್‌ಎಂ ಪ್ಯಾರಾ ಮೆಡಿಕಲ್ ಬೋರ್ಡ್‌ನಲ್ಲಿ ನೊಂದಣಿ ಅಥವಾ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೊಂದಣಿ ಮಾಡಿದವರು ಹಾಗೂ ದತ್ತಾಂಶ ನಮೂದಕರ ಹುದ್ದೆಗೆ ಯಾವುದೇ ಪದವಿ ಮತ್ತು ಡಿಸಿಎ ಡಿಪ್ಲೋಮ ಕಂಪ್ಯೂಟರ್ ಅಪ್ಲಿಕೇಷನ್ ಮತ್ತು 2 ವರ್ಷದ ಅನುಭವ ಹೊಂದಿದ ಬಗ್ಗೆ ಪ್ರಮಾಣ ಪತ್ರ ಹೊಂದಿದವರು ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News