ಬಾವಿಗೆ ಬೀಳುವುದರಿಂದ ಯುವಕನನ್ನು ರಕ್ಷಿಸಿದ ಹೊಟ್ಟೆ!

Update: 2020-08-13 15:41 GMT

ಬೀಜಿಂಗ್: ಬಾವಿಯೊಳಕ್ಕೆ ಬೀಳಲಿದ್ದ ಯುವಕನನ್ನು ಆತನ ದೊಡ್ಡ ಹೊಟ್ಟೆ ಕಾಪಾಡಿರುವ ವಿಚಿತ್ರ ಘಟನೆ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಲಯೋಯಂಗ್ ನಗರದಲ್ಲಿ ನಡೆದಿದೆ. ಅಂತೂ ಲಿಯು ಎಂಬ ಈ 28 ವರ್ಷ ವಯಸ್ಸಿನ ಯುವಕನ  ದೇಹ ಹಾಗೂ ದೊಡ್ಡ ಹೊಟ್ಟೆ ಆತನ ಜೀವವುಳಿಸಿದೆ.

ಕಳೆದ ವಾರ ನಡೆದ ಈ ಘಟನೆಯ ಸಂದರ್ಭ ನಡೆದ ರಕ್ಷಣಾ ಕಾರ್ಯಾಚರಣೆಯ ವೀಡಿಯೋವೊಂದನ್ನು ಅಗ್ನಿಶಾಮಕ ದಳದ ಅಧಿಕಾರಿ ಶೇರ್ ಮಾಡಿದ್ದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಕೈಗಳನ್ನು ಕಟ್ಟಿ ನಿಂತಿರುವ ಶರ್ಟ್ ಧರಿಸದೇ ಇರುವ ವ್ಯಕ್ತಿಯ ಸೊಂಟದ ಕೆಳಗಿನ ಭಾಗ ಬಾವಿಯೊಳಗಿದ್ದುಕೊಂಡು ಸಹಾಯಕ್ಕಾಗಿ ಅತ ಕಾಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಆತನ ದೇಹ ಬಾವಿಯ ಒಳಭಾಗದಲ್ಲಿ ಅರ್ಧದಷ್ಟು ಸಿಕ್ಕಿ ಕೊಂಡಿದ್ದರಿಂದ ಕನಿಷ್ಠ ಐದು ಮಂದಿ ಅಗ್ನಿಶಾಮಕ ಸಿಬ್ಬಂದಿ ಆತನ ಸೊಂಟದ ಸುತ್ತ ಹಗ್ಗ ಬಿಗಿಯಾಗಿ ಕಟ್ಟಿ ಆತನನ್ನು ಹೊರಕ್ಕೆಳೆದರು. ಈ ಘಟನೆಯಲ್ಲಿ ಆತನಿಗೆ ಯಾವುದೇ ಗಾಯಗಳುಂಟಾಗಿಲ್ಲ.

ಲಿಯು ಸುಮಾರು 500 ಪೌಂಡ್ ತೂಕ ಹೊಂದಿದ್ದಾನೆಂದು ಅಂದಾಜಿಸಲಾಗಿದೆ. ಆತ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದ್ದು, ಈ ತೆರೆದ ಬಾವಿಯ ಮೇಲೆ ಮುಚ್ಚಲಾಗಿದ್ದ  ಮರದ ಹಲಗೆಯ ಮೇಲೆ ಆತ ಜಿಗಿದಾಗ ಈ ಘಟನೆ ನಡೆದಿದೆ. ಈ ಬಾವಿಯ ನೀರು ಒಣಗಿದ ನಂತರ ಅದರಲ್ಲಿ ನೀರು ತುಂಬಿಸಲು ಕುಟುಂಬ ತಯಾರಿ ನಡೆಸುತಿತ್ತೆನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News