ಬೈಂದೂರಿನಲ್ಲಿ 16 ಮಂದಿಗೆ ಕೊರೋನ ಪಾಸಿಟಿವ್

Update: 2020-08-13 17:19 GMT

ಬೈಂದೂರು, ಆ.13: ಬೈಂದೂರು ತಾಲೂಕಿನಲ್ಲಿ ಇಂದು ಒಟ್ಟು 16 ಮಂದಿಯಲ್ಲಿ ಕೊರೋನ ಸೊಂಕಿಗೆ ಪಾಸಿಟಿವ್ ಕಂಡುಬಂದಿದೆ ಎಂದು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ದಾಖಲಿಸ ಲಾಗಿದ್ದು, ಅವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೂರಿನಲ್ಲಿ 3, ಬಡಾಕೆರೆ, ಬೈಂದೂರು, ಯಡ್ತರೆ, ಗೋಳಿಹೊಳೆಗಳಲ್ಲಿ ತಲಾ ಇಬ್ಬರು, ನಾವುಂದ, ಹಡವು, ನಾಡ, ಕಿರಿಮಂಜೇಶ್ವರ, ಯಳಜಿತ್‌ಗಳಲ್ಲಿ ತಲಾ ಒಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News