ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಗೆ ಭಾರೀ ಬೆಂಬಲ

Update: 2020-08-13 18:05 GMT

ವಿಲ್ಮಿಂಗ್ಟನ್,ಆ.13: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ಘೋಷಿಸಿದ 24 ತಾಸು ಗಳೊಳಗೆ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬಿಡೆನ್ ಅವರು 26 ದಶಲಕ್ಷ ಡಾಲರ್ ( ಸುಮಾರು 19.43 ಕೋಟಿ ರೂ.)ಗಳ ಚುನಾವಣಾ ನಿಧಿಯನ್ನು ಸಂಗ್ರಹಿಸುವಲ್ಲಿ ಸಫಲರಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಅಶ್ವೇತ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿರುವುದಕ್ಕೆ ಡೆಮಾಕ್ರಾಟ್ ಪಕ್ಷದ ಸದಸ್ಯರಲ್ಲಿ ಭಾರೀ ಬೆಂಬಲ ವ್ಯಕ್ತವಾಗಿರುವುದರ ಸೂಚನೆ ಇದಾಗಿದೆ ಎಂದು ಬಿಡೆನ್ ಬುಧವಾರ ತಿಳಿಸಿದ್ದಾರೆ.

ಡೆಲಾವೆರ್‌ನಲ್ಲಿ ಬುಧವಾರ ಬಿಡೆನ್ ಆಯೋಜಿಸಿದ್ದ ಚುನಾವಣಾ ನಿಧಿ ಸಂಗ್ರಹ ಸಭೆಯಲ್ಲಿ ಕಮಲಾ ಹ್ಯಾರಿಸ್ ಕೂಡಾ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಕ್ಷದ ತಳಮಟ್ಟದ ದೇಣಿಗೆದಾರರನ್ನು ಉದ್ದೇಶಿಸಿ ಮಾತನಾಡಿದ ಕಮಲಾ ತನ್ನ ಪಾಲಕರ ಹೋರಾಟದ ಪ್ರವೃತ್ತಿಯು ತನಗೆ ರಾಜಕೀಯದಲ್ಲಿ ಆಸಕ್ತಿ ಮೂಡುವಂತೆ ಮಾಡಿದೆಯೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News