ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ, ಕೈಗೆಟಕುವಂತಹ ಆರೋಗ್ಯಪಾಲನಾ ಸೌಲಭ್ಯ

Update: 2020-08-13 18:07 GMT

ವಾಶಿಂಗ್ಟನ್,ಆ.13:ಅಮೆರಿಕದಲ್ಲಿ ಜೊಬಿಡೆನ್ ನೇತೃತ್ವದ ಸರಕಾರವು ಅಸ್ತಿತ್ವಕ್ಕೆ ಬಂದಲ್ಲಿ ದೇಶದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ, ಹವಾಮಾನ ಬದಲಾವಣೆ ವಿರುದ್ಧ ಹೋರಾಡಲಾಗುವುದು ಹಾಗೂ ಎಲ್ಲರಿಗೂ ಭರಿಸಲು ಸಾಧ್ಯವಾಗುವಂತೆ ಆರೋಗ್ಯಪಾಲನಾ ಕಾಯ್ದೆಯನ್ನು ಪುನರ್‌ರೂಪಿಸ ಲಾಗುವುದು ಎಂದು ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಮೊತ್ತ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಮೂರುವರೆ ವರ್ಷಗಳ ಟ್ರಂಪ್ ಆಡಳಿತದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.ಹಾಲಿ ಅಮೆರಿಕ ಸರಕಾರದ ತಪ್ಪು ನೀತಿ,ನಿರ್ಧಾರಗಳ ದೀರ್ಘ ಪಟ್ಟಿಯನ್ನೇ ಅವರು ಸಭೆಯಲ್ಲಿ ನೀಡಿದರು.

‘‘ ತನ್ನ ದೇಹದ ಕುರಿತಂತೆ ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಲು ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುವುದು, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಜನಾಂಗೀಯವಾದವನ್ನು ಮೂಲೋತ್ಪಾಟನೆ ಮಾಡಲಾಗುವುದು, ಪ್ರತಿಯೊಬ್ಬರ ಧ್ವನಿಯು ಆಲಿಸಲ್ಪಡುವ ಹಾಗೂ ಗಣನೆಗೆ ತೆಗೆದುಕೊಳ್ಳುವುದನ್ನು ಖಾತರಿಪಡಿಸಲು ಜಾನ್ ಲೆವಿಸ್ ಮತದಾನ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತರಲಾಗುವುದು’’ ಎಂದು ಹ್ಯಾರಿಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News