×
Ad

ಲಾಕ್‌ಡೌನ್, ಆರ್ಥಿಕ ಮುಗ್ಗಟ್ಟುನಿಂದ ಅಪರಾಧ ಕೃತ್ಯ ಹೆಚ್ಚಳ ಸಾಧ್ಯತೆ: ಶ್ರೀಶೈಲ ಮುರುಗೋಡು

Update: 2020-08-14 20:42 IST

ಶಿರ್ವ, ಆ.14: ಕೊರೋನ ಸೋಂಕು ಉಡುಪಿ ಜಿಲ್ಲೆಯಲ್ಲಿ ಏರುಗತಿ ಯಲ್ಲಿದ್ದು, ಇದರ ನಿಯಂತ್ರಣಕ್ಕೆ ನಿಯಮಗಳ ಪಾಲನೆ ಮತ್ತು ಮಕ್ಕಳು ಹಾಗೂ ಹಿರಿಯ ನಾಗರಿಕರ ರಕ್ಷಣೆಗೆ ವಿಶೇಷ ಗಮನ ನೀಡುವುದು ಅಗತ್ಯ. ಅಪರಾಧ ಕೃತ್ಯಗಳ ಮಟ್ಟ ಹಾಕುವಲ್ಲಿ, ಕಾನೂನು ಸುವ್ಯವಸ್ಥೆಗೆ ಪೋಲಿಸ್ ಇಲಾಖೆ ಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಶಿರ್ವ ಆರಕ್ಷಕ ಠಾಣಾಧಿಕಾರಿ ಶ್ರೀಶೈಲ ಡಿ.ಮುರುಗೋಡು ಹೇಳಿದ್ದಾರೆ.

ಬಂಟಕಲ್ಲು ನಾಗರಿಕ ಸೇವಾ ಸಮಿತಿ ವತಿಯಿಂದ ಬಂಟಕಲ್ಲು ಶ್ರೀದುರ್ಗಾ ಪರಮೇಶ್ವರೀ ದೇವಳದ ವಠಾರದಲ್ಲಿ ಗುರುವಾರ ನಡೆದ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಪೋಲಿಸ್ ಮಾಹಿತಿ ಕಾರ್ಯಕ್ರಮದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಕೊರೋನ ಲಾಕ್‌ಡೌನ್‌ನಿಂದ ಉದ್ಯೋಗ ನಷ್ಟವಾಗಿದೆ ಮತ್ತು ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಇದರಿಂದ ಕಳ್ಳತನ, ಡ್ರಗ್ಸ್ ಮುಂತಾದ ದಂಧೆಗಳು ಹೆಚ್ಚು ನಡೆಯುವ ಸಾಧ್ಯತೆಯಲ್ಲಿ ಪ್ರತಿಯೊಬ್ಬರೂ ಜಾಗೃತಗೊಳ್ಳ ಬೇಕಾಗಿದೆ. ಇಂತಹ ಸೂಕ್ಷ್ಮ ಸುಳಿವು ಸಿಕ್ಕಿದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ಇಲಾಖೆ ಸರ್ವಸನ್ನದ್ಧವಾಗಿದೆ ಎಂದರು

ಈ ಸಂದರ್ಭದಲ್ಲಿ ಕೊರೋನಾ ಸ್ವಯಂ ಎಚ್ಚರಿಕೆ ವಾಹನ ಸ್ಟಿಕ್ಕರ್ ಬಿಡುಗಡೆ ಗೊಳಿಸಲಾಯಿತು. ಶ್ರೀದೇವಳದ ಆಡಳಿತ ಮಂಡಳಿ ಸದಸ್ಯ ಸುರೇಂದ್ರ ನಾಯಕ್, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ರಾಜಾಪುರ ಸಾರಸ್ವತ ಯುವವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಉಮೇಶ ರಾವ್, ಉಪನ್ಯಾಸಕ ಪ್ರ. ವಿಠಲ್ ನಾಯಕ್, ಶಿರ್ವ ಪೋಲಿಸ್ ಸಿಬ್ಬಂದಿ ವಿನೋದ್, ರಾೇಶ್, ಪ್ರಸಾದ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ದೇವಾ ಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News