ಕೊರೋನ ಜಾಗೃತಿಗಾಗಿ ಬಡಗಬೆಟ್ಟು ಸೊಸೈಟಿಗೆ ಪ್ರಶಸ್ತಿ
Update: 2020-08-14 20:43 IST
ಉಡುಪಿ, ಆ.14: ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಇದರ 113ನೆ ವರ್ಷದ ಸ್ಥಾಪಕರ ದಿನಾಚರಣೆಯ ಪ್ರಯುಕ್ತ ಕೊರೋನಾ ಜಾಗೃತಿಗಾಗಿ ಅತ್ಯುತ್ತಮ ಸೇವೆಗೈದ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಲಾಯಿತು.
ಸೊಸೈಟಿಯ ಪರವಾಗಿ ಜನರಲ್ ಮ್ಯಾನೇಜರ್ ಬಿ.ಜಯಕರ ಶೆಟ್ಟಿ ಅವರನ್ನು ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಸಂಜೀವ ಚದ್ಧಾ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ರವೀಂದ್ರ ರೈ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.