ಗಾಯಗೊಂಡ ಕಡಲ ಹಕ್ಕಿಯ ರಕ್ಷಣೆ

Update: 2020-08-14 15:14 GMT

ಉಡುಪಿ, ಆ.14: ರೆಕ್ಕೆ ಹಾನಿಗೊಂಡಿರುವ ಅತ್ಯಂತ ದೊಡ್ಡ ಗಾತ್ರದ ಕಡಲ ಹಕ್ಕಿಯೊಂದನ್ನು ಕುಂದಾಪುರ ಕೋಡಿ ಕಡಲ ಕಿನಾರೆಯಲ್ಲಿ ರಕ್ಷಿಸಿ ಚಿಕಿತ್ಸೆ ನೀಡ ಲಾಗುತ್ತಿದೆ.

ಎರಡು ದಿನಗಳ ಹಿಂದೆ ಕಡಲ ಕಿನಾರೆಯಲ್ಲಿ ಮಾಸ್ಕಡ್ ಬೂಬಿ ಎಂದು ಕರೆಯಲಾಗುವ ಈ ಹಕ್ಕಿ ಪತ್ತೆಯಾಗಿದ್ದು, ಈ ಕುರಿತು ದೊರೆತ ಮಾಹಿತಿ ಯಂತೆ ಕುಂದಾಪುರ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಕ್ಕಿಯನ್ನು ರಕ್ಷಿಸಿದ್ದಾರೆ. ಬಲವಾದ ಗಾಳಿಯಿಂದ ಹಕ್ಕಿಯ ರೆಕ್ಕೆಗೆ ಹಾನಿಯಾಗಿ ರುವುದು ತಿಳಿದುಬಂದಿದೆ.

‘ಈ ಕಡಲ ಹಕ್ಕಿಗೆ ಕೋಡಿಯಲ್ಲಿ ಬೆಂಗಳೂರಿನ ವೈದ್ಯ ಡಾ.ಶಾಂತನು ಕಳಂಬೆ ಚಿಕಿತ್ಸೆ ನೀಡಿದ್ದು, ಇದೀಗ ಹಕ್ಕಿ ಚೇತರಿಸಿಕೊಂಡಿದೆ. ಇಂದು ಹಕ್ಕಿಯನ್ನು ಕಡಲಿಗೆ ಬಿಡುವ ಕಾರ್ಯ ಮಾಡಲಾಗಿದೆ. ಆದರೆ ಹಕ್ಕಿ ಮತ್ತೆ ವಾಪಾಸ್ಸು ಬಂದಿದೆ. ಆದುದರಿಂದ ಎರಡು ದಿನಗಳಲ್ಲಿ ಹಕ್ಕಿಯನ್ನು ಬೋಟಿನಲ್ಲಿ ತೆಗೆದುಕೊಂಡು ಹೋಗಿ ಸಮುದ್ರ ಮಧ್ಯೆ ಬಿಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕುಂದಾಪುರ ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News