ಮಾಸ್ಕ್: 25,500ರೂ. ದಂಡ ವಸೂಲಿ

Update: 2020-08-14 15:56 GMT

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿರುವವರಿಂದ ಆ.14ರಂದು ಒಟ್ಟು 25,500ರೂ. ದಂಡ ವಸೂಲಿ ಮಾಡಲಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 500ರೂ., ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 100ರೂ., ಗ್ರಾಮೀಣ ಪ್ರದೇಶಗಳಾದ ಕಾರ್ಕಳ-7500ರೂ., ಕುಂದಾಪುರ- 4400ರೂ., ಕಾಪು- 5300ರೂ., ಬ್ರಹ್ಮಾವರ-6000ರೂ., ಹೆಬ್ರಿ- 700ರೂ., ಬೈಂದೂರು- 1000ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,86,600ರೂ. ದಂಡವನ್ನು ವಸೂಲಿ ಮಾಡ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News