ಅಸಾಂಜ್‌ಗೆ ಬ್ರಿಟನ್, ಅಮೆರಿಕದಲ್ಲಿ ನ್ಯಾಯೋಚಿತ ವಿಚಾರಣೆ ಸಿಗುವುದಿಲ್ಲ ಇಕ್ವೆಡಾರ್‌ನ ಮಾಜಿ ಕೌನ್ಸುಲ್ ಜನರಲ್

Update: 2020-08-14 18:12 GMT

ಲಂಡನ್, ಆ. 14: ‘ವಿಕಿಲೀಕ್ಸ್’ ಸ್ಥಾಪಕ ಜೂಲಿಯನ್ ಅಸಾಂಜ್ ಬ್ರಿಟನ್‌ನಲ್ಲಾಗಲಿ, ಅಮೆರಿಕದಲ್ಲಾಗಲಿ ಎಂದಿಗೂ ನ್ಯಾಯೋಚಿತ ವಿಚಾರಣೆಯನ್ನು ಎದುರಿಸುವುದಿಲ್ಲ ಎಂದು ಲಂಡನ್‌ಗೆ ಇಕ್ವೆಡಾರ್‌ನ ಮಾಜಿ ಕೌನ್ಸುಲ್ ಜನರಲ್ ಫಿಡೆಲ್ ನರ್ವೇಝ್ ಶುಕ್ರವಾರ ‘ಸ್ಪೂತ್ನಿಕ್’ ಪತ್ರಿಕೆಗೆ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಶುಕ್ರವಾರ ನಡೆದ ಅಸಾಂಜ್‌ರ ಗಡಿಪಾರು ಮೊಕದ್ದಮೆಯ ಆಡಳಿತಾತ್ಮಕ ವಿಚಾರಣೆಗೂ ಮುನ್ನ ಪತ್ರಿಕೆಗೆ ಫೋನ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘ಅಸಾಂಜ್ ನ್ಯಾಯಾಂಗ ಕಿರುಕುಳದ ಸಂತ್ರಸ್ತ ಹಾಗೂ ಅವರು ಇಲ್ಲಿ ಬ್ರಿಟನ್‌ನಲ್ಲಿ ನ್ಯಾಯೋಚಿತ ಗಡಿಪಾರು ವಿಚಾರಣೆಯನ್ನು ಎದುರಿಸುವುದಿಲ್ಲ ಎನ್ನುವುದನ್ನು ತೋರಿಸುವ ಹಲವಾರು ಪುರಾವೆಗಳಿವೆ. ಹಾಗೂ ಅಮೆರಿಕದಲ್ಲಿಯೂ ಅವರು ನ್ಯಾಯೋಚಿತ ವಿಚಾರಣೆಯನ್ನು ಎದುರಿಸುವುದಿಲ್ಲ’’ ಎಂದು ಇಕ್ವೆಡಾರ್‌ನ ಮಾಜಿ ರಾಜತಾಂತ್ರಿಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News