ಉಡುಪಿ: ಬ್ಯಾರಿ ನಿಖಾಃ ಹೆಲ್ಪ್ ಲೈನ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 08:21 GMT

ಉಡುಪಿ, ಆ.15: ಎಪ್ಪತ್ತನಾಲ್ಕನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡವು ‘ರೋಗ ಗುಣಪಡಿಸುವುದಕ್ಕಿಂತ ಬರದಂತೆ ತಡೆಯುವುದು ಉತ್ತಮ’ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಅದರಂತೆ ಉಡುಪಿ ಜಿಲ್ಲೆಯ ಕುಂಜೂರಿನ ನೂರುಲ್ ಇಸ್ಲಾಂ ಮದ್ರಸ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಮುಖಗವಸು(ಫೇಸ್ ಮಾಸ್ಕ್)ಗಳನ್ನು ಶನಿವಾರ ವಿತರಿಸಲಾಯಿತು.

ಬ್ಯಾರಿ ನಿಖಾ ಹೆಲ್ಪ್ಲೈನ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಇಮ್ತಿಯಾಝ್ ಉಚ್ಚಿಲ ಮಾಸ್ಕ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಕುಂಜೂರಿನ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಡಳಿತ ಕಮಿಟಿಯ ಪ್ರಮುಖರಾದ ಎ.ಕೆ.ಶಫಿ, ಮುಹಮ್ಮದ್ ಕುಚ್ಚಿಕಾಡ್, ರಹೀಂ ಕುಚ್ಚಿಕಾಡ್, ಪಂಚಾಯತ್ ಮಾಜಿ ಸದಸ್ಯ ರಹೀಂ ಕುಂಜೂರು, ಕಮಿಟಿಯ ಇತರ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಕುಂಜೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಅಂಗನವಾಡಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರಾಘವೇಂದ್ರ ಆಚಾರ್ಯ, ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ಮಾಜಿ ಸದಸ್ಯ ರಹೀಂ ಕುಂಜೂರು, ವಕೀಲರಾದ ಸುನೀಲ್ ಶಿವ ಮೂಲ್ಯ, ಇಕ್ಬಾಲ್ ಕುಂಜೂರು, ರಾಕೇಶ್ ಕುಂಜೂರು, ಅಂಗನವಾಡಿ ಮುಖ್ಯಸ್ಥೆ ಜ್ಯೋತಿ, ಆಶಾ ಕಾರ್ಯಕರ್ತೆ ಶ್ರೀಮತಿ, ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಪುಟಾಣಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News