ವಿಟ್ಲ: ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2020-08-15 09:04 GMT

ವಿಟ್ಲ, ಆ.15: ವಿಟ್ಲ ಕೇಂದ್ರ ಜುಮಾ ಮಸೀದಿಯ ಅಧೀನದ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಹಾಗೂ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮೇಗಿನಪೇಟೆ ಧ್ವಜಾರೋಹಣ ಮಾಡಿದರು. ಹಕೀಂ ಅರ್ಷದಿ ದುಆಗೈದರು.

    ಶಾಲಾ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ., ಮೇಲ್ವಿಚಾರಕ ವಿ.ಕೆ.ಎಂ.ಅಶ್ರಫ್, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ, ಇಕ್ಬಾಲ್ ಹಳೆಮನೆ, ಅಬ್ದುಲ್ ರಹಿಮಾನ್ ದೀಪಕ್, ಮಸೀದಿಯ ಕಾರ್ಯದರ್ಶಿ ಇಬ್ರಾಹೀಂ ಕೊಲ್ನಾಡ್, ಜತೆ ಕಾರ್ಯದರ್ಶಿ ಇಕ್ಬಾಲ್ ಶೀತಲ್, ಇಸ್ಮಾಯೀಲ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.

 ಶಿಕ್ಷಕರಾದ ಲುಕ್ಮಾನ್, ಮಾಸಿತಾ, ಮುಹಮ್ಮದ್ ರಫೀಕ್  ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News