ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 12:00 GMT

ಮೂಡಬಿದ್ರಿ ಆ.15: ಅಲ್ ಫುರ್ಖಾನ್ ಇಸ್ಲಾಮಿಕ್ ವಿದ್ಯಾಸಂಸ್ಥೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಗೂಗಲ್ ಮೀಟ್ ಮೂಲಕ ಡಿಜಿಟಲ್ ಆಗಿ ಆಚರಿಸಲಾಯಿತು.  ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಹೆತ್ತವರು ಆನ್ ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಾಂಶುಪಾಲರಾದ ಶ್ರೀಮತಿ ನಝ್ ರಾನ ಶಾಫಿ ಶುಭ ಹಾರೈಸುತ್ತಾ ಮಾತನಾಡಿ ವರ್ಷಂಪ್ರತಿ ನಡೆಯುವ ಶಾಲೆಯ ಎಲ್ಲಾ ಚಟುವಟಿಕೆಗಳು ಆನ್ ಲೈನ್ ಮುಖಾಂತರ ನಡೆಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಹುರಿದುಂಬಿಸಿದರು. .

ವಿದ್ಯಾರ್ಥಿಗಳಾದ ಮಾಹಿರ ಅರಬಿಕ್  ಹಾಗೂ ಅಝ್ ಫರ್ ಹುಸೈನ್ ಇಂಗ್ಲಿಷ್ ಭಾಷೆಯಲ್ಲಿ ಆನ್ ಲೈನ್ ಮುಖಾಂತರ ಭಾಷಣ ಮಾಡಿದರು.

ಧ್ವಜಾರೋಹಣಗೈದು ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ ಮಹಮ್ಮದ್ ಅಶ್ರಫ್ ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಫಲ. ಅವರ ಬಲಿದಾನವನ್ನು ಸಾರ್ಥಕವಾಗಿಸೋಣ ಎಂದರು.

ಸಂಸ್ಥೆಯ ಟ್ರಸ್ಟಿ ಮೊಹಮ್ಮದ್ ಅಶ್ಫಾಕ್, ಆಡಳಿತಾಧಿಕಾರಿ ಮೊಹಮ್ಮದ್ ಶಹಾಂ, ವಿವಿಧ ವಿಭಾಗಗಳ ಉಪ ಪ್ರಾಂಶುಪಾಲರಾದ ಅಲ್ತಾಫ್  ಹಾಗೂ ಶ್ರೀಮತಿ ಅನಿಸಾ, ತಾಂತ್ರಿಕ ಆಡಳಿತಾಧಿಕಾರಿ  ನೂರ್ ಮೊಹಮ್ಮದ್, ದೈಹಿಕ ಶಿಕ್ಷಕ ಉಬೇದುಲ್ಲಾ ಖಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಹಝಾನ್ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಹಿಫ್ ಝಾ ಸಫಿಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News