ಉಡುಪಿ : ‘ಮಣಿಪಾಲ್ ಇನ್’ ಹೊಟೇಲ್ ಮತ್ತು ಕನ್ವೆಂಶನ್ ಸೆಂಟರ್ ನಲ್ಲಿ ಬ್ಯಾಂಕ್ವೆಟ್ ಹಾಲ್‌ಗಳಿಗೆ ಬುಕ್ಕಿಂಗ್ ಆರಂಭ

Update: 2020-08-15 12:39 GMT

ಉಡುಪಿ, ಆ.15: ನಗರದ ಕರಾವಳಿ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ 1,4 ಲಕ್ಷ  ಚದರಡಿಯ ವಿಶಾಲ ಸ್ಥಳದಲ್ಲಿ ನಿರ್ಮಾಣವಾಗಿರುವ ಕರಾವಳಿ ಕರ್ನಾಟಕದ ಅತಿದೊಡ್ಡ ಹೋಟೆಲ್ ಎಂಬ ಖ್ಯಾತಿಯ  ‘ಮಣಿಪಾಲ್ ಇನ್’ ಹೊಟೇಲ್ ಮತ್ತು ಕನ್ವೆಂಶನ್ ಸೆಂಟರ್ ನಲ್ಲಿ ಆ.15ರಿಂದ ಬ್ಯಾಂಕ್ವೆಟ್ ಹಾಲ್‌ಗಳಿಗೆ ಬುಕ್ಕಿಂಗ್ ಆರಂಭಗೊಂಡಿದೆ.

ಮಣಿಪಾಲ ಇನ್ ಹೊಟೇಲ್ ಉಡುಪಿ ನಗರದ ಹೃದಯ ಭಾಗದಿಂದ ಕೇವಲ ಎರಡು ಕಿ.ಮೀ. ಅಂತರದಲ್ಲಿದೆ . ಕರ್ನಾಟಕ ಕರಾವಳಿಯ ಆತಿಥ್ಯ ಕ್ಷೇತ್ರದಲ್ಲಿ ಅನೇಕ ಮುಖ್ಯ ಮೈಲಿಗಲ್ಲುಗಳನ್ನು ರೂಪಿಸಿರುವ ಮಣಿಪಾಲ ಇನ್, ಬಹು ಅಂತಸ್ತಿನ ಕನ್ವೆಂಶನ್ ಸೆಂಟರ್ ಆಗಿದ್ದು, ಎಲ್ಲ ರೀತಿಯ ಸಣ್ಣ, ದೊಡ್ಡ  ಸಭೆ, ಸಮಾರಂಭ, ಕಾರ್ಯಕ್ರಮ ಮತ್ತು ವಿವಿಧ ಅತಿಥಿ-ಆತಿಥ್ಯಗಳಿಗೆ  ಸರಿ ಹೊಂದುವ ರೀತಿಯಲ್ಲಿ ರೂಪಿಸಲಾಗಿದೆ.

ಮಣಿಪಾಲ ಇನ್ ಹೊಟೇಲ್ ಐದು ಬಗೆಯ ಬ್ಯಾಂಕ್ವೆಟ್ ಹಾಲ್‌ಗಳು  ಮತ್ತು ಕನ್ವೆಂಶನ್ ಸೆಂಟರ್‌ಗಳನ್ನು ಹೊಂದಿದೆ. ಅತಿ ಸಣ್ಣ ಗಾತ್ರದ 40 ರಿಂದ ಹಿಡಿದು 2,000ಕ್ಕೂ ಅಧಿಕ ಅತಿಥಿ ಸಮೂಹಕ್ಕೆ ಇಲ್ಲಿ ಸರ್ವ ಸೌಲಭ್ಯಗಳಿವೆ . ಇದಕ್ಕೆ ಪೂರಕವಾಗಿ ಒಟ್ಟು ಆರು ವಿವಿಧ ರೆಸ್ಟೊರೆಂಟ್ ‌ಗಳಿವೆ. 30 ಡೀಲಕ್ಸ್ ರೂಮು ಗಳು ಮತ್ತು ನಾಲ್ಕು ಸ್ವೀಟ್‌ಗಳಿದ್ದು ಅತ್ಯುತ್ತಮ ಡೈನಿಂಗ್ ಮತ್ತು ಸ್ವಾದಿಷ್ಟ ಕ್ಯುಲಿನರಿ ಆಯ್ಕೆಗಳನ್ನು ಹೊಂದಿದೆ.

ವಿಶಿಷ್ಟ ನೈಸರ್ಗಿಕ ನೋಟ

ಹೊಟೇಲಿನ ಪ್ರತಿಯೊಂದು ವಿಭಾಗಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ವಿಶ್ವಾದ್ಯಂತದ ಕುಶಲ ಕಲೆಗಾರರಿಂದ ವಿಶಿಷ್ಟವಾಗಿ ಹಸ್ತರಚಿತವಾಗಿರುವ ಅತ್ಯಾಕರ್ಷಕ ಮತ್ತು ಕಲಾತ್ಮಕ ಒಳಾಲಂಕಾರವನ್ನು ಇಲ್ಲಿ ಮಾಡಲಾಗಿದೆ. ಹೊಟೇಲ್‌ನ ಎಲ್ಲ ಅಂತಸ್ತುಗಳು ಎಲ್ಲ ಕಡೆಗಳ ವಿಶಿಷ್ಟ ನೈಸರ್ಗಿಕ ನೋಟ ಗಳನ್ನು ಆಸ್ವಾದಿಸುವುದಕ್ಕೆ ಅವಕಾಶ ಕಲ್ಪಿಸುತ್ತವೆ. ಪಶ್ಚಿಮ ಭಾಗದಲ್ಲಿ ಪಶ್ಚಿಮ ಘಟ್ಟಗಳ ರಮಣೀಯ ನಿಸರ್ಗದ ಹಿನ್ನೆಲೆಯಲ್ಲಿ ಕಂಗೊಳಿಸುತ್ತಿರುವ ಮಣಿಪಾಲದ ಹೃದಯಂಗಮ ನೋಟವನ್ನು ಕಾಣಬಹುದಾಗಿದೆ. ಇನ್ನೊಂದು ಕಡೆ ಇದನ್ನು ಮೀರಿಸುವ ರೀತಿಯಲ್ಲಿ ಅರಬ್ಬೀ ಸಮುದ್ರದ ವಿಹಂಗಮ ನೋಟ ಕಣ್ಮನವನ್ನು ತುಂಬುತ್ತವೆ.

ಸೆ.1ರಿಂದ ವಿರಾಸತ್ ಆರಂಭ

ಮೊಗಲ್ ಮತ್ತು ರಾಜಪೂತ ಸಂಸ್ಕೃತಿಯಿಂದ ಪ್ರಭಾವಿತವಾಗಿರುವ ಪಾರಂಪರಿಕ, ಅತ್ಯುತ್ಕೃಷ್ಟ ಸ್ವಾದಿಷ್ಟ ಫೈನ್ ಡೈನ್ ಹೆಗ್ಗಳಿಕೆ ಹೊಂದಿರುವ ಇಲ್ಲಿನ ರೆಸ್ಟೋರೆಂಟ್‌ಗಳು ಅಧಿಕೃತ ಐತಿಹಾಸಿಕ ಸನ್ನಿವೇಶವನ್ನು ಪುನರ್ ರೂಪಿಸುವಂತಿವೆ. ವೈಭವಪೂರ್ಣ ರಾಜಪೂತ ಮತ್ತು ಮೊಗಲ್ ಪ್ಯಾಲೇಸ್‌ಗಳ ವಿಶಿಷ್ಟ ಹಾಗೂ ಪ್ರಮುಖ ಐತಿಹಾಸಿಕ ಗುಣಲಕ್ಷಣಗಳನ್ನು ಹೊಂದಿರುವ ‘ವಿರಾಸತ್’ ರೆಸ್ಟೋರೆಂಟ್ ಸೆ.1ರಿಂದ ಆರಂಭಗೊಳ್ಳಲಿದೆ. ಹಸ್ತ ಕೆತ್ತನೆಯಲ್ಲಿ ರೂಪುಗೊಂಡ ಸ್ಯಾಂಡ್ ಸ್ಟೋನ್ ಚಿಲುಮೆಯಿಂದ ತೊಡಗಿ ನೈಜ ಹವೇಲಿಗಳಿಂದ ಸಂಗ್ರಹಿಸ ಲಾದ ಕಲಾತ್ಮಕ ಕರಕುಶಲ ವಸ್ತುಗಳ ಸಂಗ್ರಹಗಳಲ್ಲಿ ಅತ್ಯುತ್ಕೃಷ್ಟ ಕಲೆಯ ಪ್ರದರ್ಶನ ಇಲ್ಲಿ  ಸಾಕಾರಗೊಂಡಿದೆ.

ವಿಶಿಷ್ಟ ಹಾಗೂ ವೈವಿಧ್ಯಮಯ ಭೋಜನ (ಡೈನಿಂಗ್) ಅನುಭವವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾಲ್ಕು ಆಸನಗಳ ಆಯ್ಕೆಯು ಲಭ್ಯವಿದೆ. ಇವುಗಳಲ್ಲಿ ಮಜ್ಲೀಸ್/ಬೈಠಕ್ ಸ್ಥಳವು ಮುಖ್ಯವಾಗಿ ವಿಶಿಷ್ಟವಾಗಿದೆ. ಇದು ಸಾಂಪ್ರದಾಯಿಕ ಮತ್ತು ಪಾರಂಪರಿಕ ಮೊಗಲ್ ಮತ್ತು ರಾಜಪೂತ ಡೈನಿಂಗ್ ಶೈಲಿಯನ್ನು ಸಾದರಪಡಿಸುವಂತಿದೆ. ಇದರಲ್ಲಿ ಅತಿಥಿಗಳಿಗೆ ಭೋಜನಕ್ಕೆ ಕುಳಿತುಕೊಳ್ಳಲು ತಗ್ಗು ಆಸನಗಳ ಸೋಫಾ ಇವೆ. ಈ ತಗ್ಗು ಆಸನಗಳಲ್ಲಿ ಅತಿಥಿಗಳು ಸಾಂಪ್ರದಾಯಿಕ ಚಕ್ಕಳ- ಮಕ್ಕಳ ಶೈಲಿಯಲ್ಲಿ ಕುಳಿತುಕೊಳ್ಳಬಹುದಾಗಿದೆ. ನೈಜ ರಾಜಪೂತ ಹವೇಲಿ ಗಳಿಂದ ಪಡೆಯಲಾದ ಸುಂದರ ಕಲಾತ್ಮಕ ಶೈಲಿಯ ಬಾಗಿಲುಗಳನ್ನು ಇಲ್ಲಿ ಭೋಜನ ಉಣ ಬಡಿಸುವ ಟೇಬಲ್‌ಗಳನ್ನಾಗಿ ಬಳಸಲಾಗಿದೆ.

ಗ್ರ್ಯಾಂಡ್ ಮಿಲೇನಿಯಮ್ ಕನ್ವೆಂಶನ್ ಸೆಂಟರ್‌

ಹೊಟೇಲ್‌ನಲ್ಲಿನ ಅತೀ ದೊಡ್ಡ ಕನ್ವೆಂಶನ್ ಸೆಂಟರ್ ಅಂದರೆ ಗ್ರ್ಯಾಂಡ್ ಮಿಲೀನಿಯಮ್. 1,000ದಿಂದ 3,000ದಷ್ಟು ಸಾಮರ್ಥ್ಯ ಹೊಂದಿರುವ ಗ್ರ್ಯಾಂಡ್ ಮಿಲೇನಿಯಮ್, ಮದುವೆ ಮತ್ತು ಇತರ ದೊಡ್ಡ ಸಮಾರಂಭಗಳಿಗೆ ಅತ್ಯಂತ ಸಮರ್ಪಕವಾಗಿದೆ. ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ ಹೊಳೆದು ಝಗಮಘಿಸುವ ಈ ಹಾಲ್‌ನ ವೇದಿಕೆಯು 46 ಅಡಿ ಉದ್ದ 32 ಅಡಿ ಅಗಲವಿದೆ. ಮೇಲಾಗಿ ಇಲ್ಲಿ ಅತ್ಯಾಧುನಿಕ ಜೆಬಿಎಲ್ ಲೈನ್ ಸ್ಪೀಕರ್ ಸಿಸ್ಟಮ್ ಅಳವಡಿಸಲಾಗಿದ್ದು ಪ್ಲಗ್- ಎನ್-ಪ್ಲೇ ಡಿಜೆ ಕನ್ಸೋಲ್ ವ್ಯವಸ್ಥೆಯನ್ನೂ ಅಣಿಗೊಳಿಸಲಾಗಿದೆ.

ಈ ಹಾಲ್ ಎರಡು ಚೇಂಜಿಂಗ್ ರೂಮುಗಳನ್ನೂ, ವಧು ಮತ್ತು ವರನ ಕುಟುಂಬದವರಿಗೆ ಎರಡು ಹೆಚ್ಚುವರಿ ರೂಮುಗಳನ್ನೂ ಹೊಂದಿದೆ. ಈ ಹಾಲ್‌ನ ಮೆಝನೈನ್ ಅಂತಸ್ತಿನಲ್ಲಿ ನೂರು ಮಂದಿ ಆಸೀನರಾಗಬಹುದಾದ ಪ್ರತ್ಯೇಕ ಗ್ಯಾಲರಿ ಇದ್ದು ಇಲ್ಲಿ ಮಹಿಳೆಯರು, ವಿಐಪಿಗಳು ಮತ್ತು ಇತರ ವಿಶೇಷ ಅತಿಥಿಗಳು ಆಸೀನರಾಗಬಹುದಾಗಿದೆ. ಈ ಹಾಲ್ 13,000 ಚದರಡಿಯ ಪ್ರತ್ಯೇಕ ಡೈನಿಂಗ್ ಹಾಲ್ ಹೊಂದಿದೆ. ಅತ್ಯಾಧುನಿಕ ತಾಂತ್ರಿಕ ಸೌಕರ್ಯದ ಅಡುಗೆ ಮನೆ, ಬಹುಬಗೆಯ ಬ್ಯಾಂಕ್ವೆಟ್ ಕೌಂಟರ್‌ಗಳನ್ನು ಹೊಂದಿರುವುದು ಗ್ರ್ಯಾಂಡ್ ಮಿಲೇನಿಯಮ್‌ನ ವೈಶಿಷ್ಟ್ಯವಾಗಿದೆ.

ವಿವಿಧ ಆಕಷರ್ಣೀಯ ಹಾಲ್‌ಗಳು

‘ಸಮ್ಮೇಳನ’ - ವಿಶಿಷ್ಟ ಬ್ಯಾಂಕ್ವೆಟ್ ಹಾಲ್ ಇದಾಗಿದ್ದು, ಇದು 1,000ದಿಂದ 1,500 ಅತಿಥಿಗಳ ಸಮಾವೇಶಕ್ಕೆ ತಕ್ಕುದಾಗಿದೆ. ಈ ಹಾಲ್‌ಗೆ ಮೀಸಲಾಗಿರುವಂತೆ ಪ್ರತ್ಯೇಕ ಆಡಿಯೋ, ಲೈಟ್ ಮತ್ತು ವಿಡಿಯೋ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ.

‘ಝಿಹಾ’ - ಸಮಕಾಲೀನ ಶೈಲಿಯಲ್ಲಿ ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸ ಲಾಗಿರುವ ಝಿಹಾ ಬ್ಯಾಂಕ್ವಟ್ ಹಾಲ್ 200-250 ಸಾಮರ್ಥ್ಯ ಹೊಂದಿದ್ದು ಇದು ಕಾರ್ಪೊರೇಟ್ ಕಾರ್ಯಕ್ರಮಗಳಿಗೆ, ಪಾರ್ಟಿಗಳಿಗೆ ತಕ್ಕುದಾಗಿದೆ. ಇಲ್ಲಿ ಅತ್ಯಾಧುನಿಕ ತಾಂತ್ರಿಕತೆಯ ಆಡಿಯೋ-ವಿಡಿಯೋ ಸೌಕರ್ಯವಿದೆ.

ಈ ಹಾಲ್‌ಗೆ ಮೀಸಲಾಗಿರುವ ಬಫೆ ಹಾಲ್ ಸೌಕರ್ಯವೂ ಇದೆ. ಇದು ಕಾರ್ಪೊ ರೇಟ್ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಯೋಗ್ಯವಾಗಿದೆ. 

‘ಮೀಟಿಂಗ್ ಲಾಂಜ್’ - ತಿಳಿ ಕಂದು ವರ್ಣದಲ್ಲಿ ಕಂಗೊಳಿಸುವ ಮೀಟಿಂಗ್ ಲಾಂಜ್ ದೊಡ್ಡ ಗಾತ್ರದ ಬೋರ್ಡ್ ರೂಮ್ ಆಗಿದ್ದು ಇದು 40 ಮಂದಿ ಆಸೀನರಾಗುವ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ ಅತ್ಯಾಧುನಿಕ ಕಾನ್ಫರೆನ್ಸ್ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಇದು ತನ್ನದೇ ಆದ ಪ್ರತ್ಯೇಕ ಬ್ಯಾಂಕ್ವೆಟ್ ಸ್ಥಳಾವಕಾಶವನ್ನೂ ಹೊಂದಿದೆ.

‘ಸಿಂಡ್ರೆಲ್ಲಾ’ -  ಮಹಿಳೆಯರಿಗೆ ಖುಷಿ ಕೊಡುವ  ಅದ್ಭುತ ಮತ್ತು ಅತ್ಯಾಕರ್ಷಕ ಸೆಟ್ಟಿಂಗ್ ಹೊಂದಿದೆ. ಬಾಲ್ ರೂಮ್ ಆಗಿರುವ ಇದು 80-100 ಸಾಮರ್ಥ್ಯವನ್ನು ಹೊಂದಿದೆ. ಇದು ಸಂಪೂರ್ಣವಾಗಿ ಶ್ವೇತ ವರ್ಣದಲ್ಲಿ ಕಂಗೊಳಿಸುವ ವಿಕ್ಟೋರಿಯನ್ ವಿನ್ಯಾಸವನ್ನು ಹೊಂದಿದೆ. ನೈಜ ಗಾತ್ರದ ಬಂಡಿ ಇಲ್ಲಿನ ಪ್ರಧಾನ ಆಕರ್ಷಣೆ. ಇದನ್ನು ಸಿಂಡ್ರೆಲ್ಲಾ ಕಥೆಯಲ್ಲಿ ಬರುವ ವಿವರಗಳನ್ನು ಆಧರಿಸಿ ಪುನರ್ ಸೃಷ್ಟಿಸಲಾಗಿದೆ. ಇದನ್ನು 2500 ಫೈಬರ್ ಆಪ್ಟಿಕ್ ದೀಪಗಳಿಂದ ಬೆಳಗುವಂತೆ ಮಾಡಲಾಗಿದ್ದು ಅಚ್ಚರಿಯ ಮತ್ತು ರೋಮಾಂಚಕ ಸನ್ನಿವೇಶವನ್ನು ಪುನರ್ ಸೃಷ್ಟಿಸಲು ಯತ್ನಿಸಲಾಗಿದೆ.

ಹೊಟೇಲಿಗೆ ಬೇಸ್‌ಮೆಂಟ್‌ನಲ್ಲಿ ತನ್ನದೆ ಆದ ಪ್ರತ್ಯೇಕ ಮತ್ತು ಸುವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದ್ದು ಇದು 30,000ಕ್ಕೂ ಅಧಿಕ ಚದರಡಿ ಸ್ಥಳಾವಕಾಶ ವನ್ನು ಹೊಂದಿದೆ. ಜತೆಗೆ 11 ಮೀಟರ್‌ಗಳ ಡ್ರೈವ್ ವೇ ಕೂಡ ಇದೆ. ಈ ಪಾರ್ಕಿಂಗ್‌ನಲ್ಲಿ 150ಕ್ಕೂ ಹೆಚ್ಚು ಕಾರುಗಳು ಮತ್ತು 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸುಲಭವಾಗಿ ನಿಲ್ಲಿಸುವುದಕ್ಕೆ ಸ್ಥಳಾವಕಾಶವಿದೆ.

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9449473502, 9141675500.
ಇಮೇಲ್ ವಿಳಾಸ: reservations@manipalinn.com/ 
www.manipalinn.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News