×
Ad

ಟೀಂ ಬಿ ಹ್ಯೂಮೆನ್ ತಂಡದಿಂದ ಮಸೀದಿಗಳಿಗೆ ಮಾಸ್ಕ್, ಮ್ಯಾಟ್ ವಿತರಣೆ

Update: 2020-08-15 18:29 IST

ಮಂಗಳೂರು : ಕೊರೋನ ಸೋಂಕು ಹರಡದಂತೆ ತಡೆಯುವ ಸಲುವಾಗಿ ಟೀಂ ಬಿ ಹ್ಯೂಮೆನ್ ತಂಡದಿಂದ ಮಸೀದಿಗಳಿಗೆ ಮಾಸ್ಕ್ ಮತ್ತು ಮ್ಯಾಟ್ ವಿತರಿಸಲಾಯಿತು.

ಕೋವಿಡ್ -19 ವ್ಯಾಪಿಸಿದ ಆರಂಭದ ಸಮಯದಿಂದಲೂ ಸಮಾಜದ ಜನರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿರುವ ಟೀಂ ಬೀ- ಹ್ಯೂಮೆನ್ ಸಂಘಟನೆಯು ಇದೀಗ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ನಮಾಝ್ ಮಾಡುವ ಮ್ಯಾಟ್ (ಮುಸಲ್ಲ) ಹಾಗೇ ಮುಖಕ್ಕೆ ದರಿಸುವ ಮಾಸ್ಕ್ ವಿತರಿಸಿತು. 

ಕೋವಿಡ್ ಗೆ ಸಂಬಂಧಿಸಿ, ನಾಗರಿಕರ ಸುರಕ್ಷತೆಯ ದೃಷ್ಠಿಯಿಂದ ಸರಕಾರವು ಹಲವು ನಿಂಬಂಧನೆಗಳನ್ನು ಮಾಡಿದೆ. ಈ ನಿಯಮ ಪಾಲಿಸಿ, ಮಸೀದಿಗಳನ್ನೂ ತೆರೆಯಲು ಅವಕಾಶ ನೀಡಿದೆ. ಪ್ರತೀ ದಿನವು ಐದು ಹೊತ್ತು ನಮಾಝ್ ಇರುವುದರಿಂದ ನಿಯಮಗಳ ಪಾಲಿಸಲು ಅನುಕೂಲ ಆಗುವಂತೆ ಟೀಂ ಬಿ ಹ್ಯೂಮೆನ್ ಸುಮಾರು 7,500 ಮಾಸ್ಕ್ ಹಾಗೂ 5500 ಪ್ರೇಯರ್ ಮ್ಯಾಟ್ ವಿವಿಧ ಮಸೀದಿಗಳಲ್ಲಿ ವಿತರಿಸಿದೆ.

ಕೊರೋನ ಅಪಾಯಕಾರಿ ಇಲ್ಲಾ ಎನ್ನುವ ಮನೋಭಾವ ಬೆಳೆಯುತ್ತಿದೆ. ಇದು ಬಹಳ ಅಪಾಯಕಾರಿಯಾದ ಮನಸ್ಥಿತಿ. ಕೊರೋನ ವೈರಸ್ ಒಬ್ಬರಿಂದ, ಇನ್ನೊಬ್ಬರಿಗೆ ವ್ಯತಿರಿಕ್ತವಾಗಿ ಇರುತ್ತದೆ. ಅದು ಶೀಘ್ರ ಹರಡುವ ಮೂಲಕ ಕೆಲವರಿಗೆ ತೊಂದರೆ ಕೊಡದಿದ್ದರೂ, ಇನ್ನೊಬ್ಬರನ್ನು ನಾವು ಅಪಾಯಕ್ಕೆ ದೂಡುವ ಭಯವಿದೆ. ಗರ್ಭಿಣಿಯರು, ಹಿರಿಯರು, ಮಕ್ಕಳು, ದೇಹತೂಕ ಇರುವವರು, ರೋಗ ಇರುವವರ ಮೇಲೆ ಈ ವೈರಸ್ಸ್ ಮಾರಕ ಪರಿಣಾಮ ಬೀರುತ್ತದೆ. ಹಾಗಾಗಿ, ಯಾರೂ ನಿರ್ಲ್ಯಕ್ಷ್ಯ ವಹಿಸಬಾರದು. ವೈರಸ್ ನ ಚೈನ್ ಬ್ರೇಕ್ ಮಾಡದೇ ಇದ್ದರೆ ನಾವು ಹೀಗೇ ಗಂಭೀರ ಸಾಮಾಜಿಕ ಸ್ಥಿತಿಯಲ್ಲಿ ಹಸಿವು, ಆರ್ಥಿಕ ಅದಪತನಕ್ಕೆ ಹೋಗುತ್ತೇವೆ. ಈಗಾಗಲೇ ಸರಕಾರ ನೀಡಿದ  ಕರೆಂಟ್ ಬಿಲ್, ಬ್ಯಾಂಕ್ ಲೋನ್ ಮುಂತಾದ ವಿನಾಯತಿ ತಿಂಗಳು ಮುಗಿದಿದೆ. ಕೊರೋನದ ನೈಜ ಅಟ್ಟ ಹಾಸ ಇನ್ನಷ್ಟೂ ನಮ್ಮನ್ನು ಬಾಧಿಸಲಿದೆ. ಹಾಗಾಗಿ, ನಾವು ಖಡ್ಡಾಯವಾಗಿ ಮಾಸ್ಕ್ ದರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈ ತೊಳೆಯುವುದು ರೂಢಿಯಾಗಿಸಬೇಕು. ಈಗಾಗಲೇ ನಮ್ಮ ಬೇಜವಾಬ್ದಾರಿಯಿಂದ ಕೊರೋನ ಸಾಮೂಹಿಕವಾಗಿ ಹರಡಿದೆ. ಹಲವು ಜೀವಗಳು ಬಲಿಯಾಗಿದೆ. ಹಾಗಾಗಿ,  ಅನಾವಶ್ಯಕವಾಗಿ ಸುತ್ತುವುದು ಅಥವಾ ಸಭೆ ಸೇರಿವುದು ನಿಲ್ಲಿಸಬೇಕು. ಆದಷ್ಟು ನಮ್ಮನ್ನು ನಾವು ಲಾಕ್ ಡೌನ್ ನಿಬಂಧನೆಗೆ ಒಳಪಡಿಸಿ ಎಚ್ಚರಿಕೆ ವಹಿಸಬೇಕು ಎಂದು ಮ್ಯಾಟ್ ಮತ್ತು ಮಾಸ್ಕ್ ವಿತರಿಸಿದ ಟೀಂ ಬಿ ಹ್ಯೂಮನ್ ತಂಡದ ಸ್ಥಾಪಕರಾದ ಆಸಿಫ್ ಡೀಲ್ಸ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ನಮ್ಮ ಬೇಜವಾಬ್ದಾರಿ ಮತ್ತು ತಾತ್ಸಾರವು ನಮ್ಮ ಭವಿಷ್ಯವನ್ನೇ ನಾಶ ಮಾಡಲಿದೆ. ಹಾಗಾಗಿ ಎಚ್ಚರಿಕೆ ವಹಿಸಿ, ಮಾಸ್ಕ್ ದರಿಸಿ, ನಮಾಝ್ ಮಾಡುವಾಗ ಜನರ ಸುರಕ್ಷತೆಗಾಗಿ ನಾವು ಈ ಮಾಸ್ಕ್ ಮತ್ತು ಮ್ಯಾಟ್ ವಿತರಿಸಿದ್ದೇವೆ ಎಂದು ಆಸಿಫ್ ಹೇಳಿದರು.

ಮಂಗಳೂರಿನ ಎಲ್ಲಾ ಜುಮಾ ಮಸೀದಿಗಳಲ್ಲೂ ಈ ಮ್ಯಾಟ್ ಮತ್ತು ಮಾಸ್ಕ್ ವಿತರಿಸಲಾಗಿದ್ದು, ಉಳ್ಳಾಲ - ತಲಪಾಡಿ- ಬಂಟ್ವಾಳ  - ಪುತ್ತೂರು - ಮುಡಿಪು - ಉಚ್ಚಿಲ - ಮೂಡಬಿದ್ರೆ - ಜೆಪ್ಪು- ಬೊಳಾರ - ಕುದ್ರೋಳಿ - ಕಂಕನಾಡಿ, ಈದ್ಗಾ ಮಸ್ಜಿದ್,  ಬಂದರ್ ಮಸೀದಿಗಳಲ್ಲಿ ಹಾಗೇ ಜಿಲ್ಲೆಯ ಇನ್ನಿತರ ಪ್ರದೇಶಗಳಲ್ಲಿ ಮಾಸ್ಕ್ ಮತ್ತು ಮ್ಯಾಟ್ ಗಳನ್ನು ವಿತರಿಸಲಾಯಿತು. ಎಲ್ಲರೂ ಸುರಕ್ಷಿತರಾಗಿ ಹಾಗೇ ಸರಕಾರದ ನಿಯಮ ಪಾಲಿಸಿ ಎಂದು ಟೀಂ ಬಿ ಹ್ಯೂಮೆನ್ ತಂಡ ಸಾರ್ವಜನಿಕರಲ್ಲಿ ವಿನಂತಿಸಿದೆ.

################
 Contact #
* Team B-Human *
* 9880012388 *
_______
http://Www.b-human.in/-------------------------------------- --------
GOOGLEPAY / PHONEPE / PAYTM: +919880012388 OR B-Human @ upi
__________
B HUMAN
 www.b-human.in/
www.facebook.com/b.humanmlore/
###################

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News