×
Ad

ಕೆಎಂಜೆ ಉಡುಪಿ ಜಿಲ್ಲಾ ಸಮಿತಿಯಿಂದ ಫ್ರೀಡಂ-74 ಆಚರಣೆ

Update: 2020-08-15 20:12 IST

ಉಡುಪಿ, ಆ.15: ಕರ್ನಾಟಕ ಮುಸ್ಲಿಂ ಜಮಾಅತ್‌ನ ರಾಜ್ಯ ಸಮಿತಿಯ ನಿರ್ದೇಶನದಂತೆ ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಫ್ರೀಡಂ-74 ಹಾಗೂ ಕೆಎಂಜೆ ಉಡುಪಿ ಜಿಲ್ಲಾ ಸೆಕ್ರೆಟ್ರೀಯೇಟ್ ಮೀಟ್ ಬ್ರಹ್ಮಾವರ ಝೈಕಾ ರೆಸ್ಟೋರೆಂಟ್ನಲ್ಲಿ ಇಂದು ಜರಗಿತು.

ಅಧ್ಯಕ್ಷತೆಯನ್ನು ಸಮಿತಿಯ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಗೌಸ್ ಕಾರ್ಕಳ ವಹಿಸಿದ್ದರು. ರಾಜ್ಯ ಮುಸ್ಲಿಂ ಜಮಾಅತ್ ನ ಜಿಲ್ಲಾ ಕೋ-ಓಡಿನೆಟರ್ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅಗಲಿದ ಕಾರ್ಯಕರ್ತರ ಹೆಸರಿನಲ್ಲಿ ನಡೆಸಿದ ಪ್ರಾರ್ಥನಾ ಮಜ್ಲಿಸ್ನ ನೇತೃತ್ವ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಫ್ರೀಡಂ-74 ಎಂಬ ವಿಷಯದ ಬಗ್ಗೆ ಸಂದೇಶ ನೀಡಿದರು.

ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಬಿ.ಎಂ.ಮೊಯ್ದಿನ್ ಕಟಪಾಡಿ, ಕಾರ್ಕಳ ತಾಲೂಕು ಅಧ್ಯಕ್ಷ ಇಂಜಿನಿಯರ್ ನಾಸಿರ್ ಬೈಲೂರು, ಬ್ರಹ್ಮಾವರ ತಾಲೂಕು ಅಧ್ಯಕ್ಷ ಜೆ.ಮುಷ್ತಾಕ್ ಹೊನ್ನಾಳ, ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಕೆ.ಎಸ್.ಎಂ.ಮನ್ಸೂರ್ ದೊಡ್ಡಣಗುಡ್ಡೆ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News